ತಾಲೂಕು ಸುದ್ದಿ

ಪುತ್ತೂರು: ಕೆಎಸ್‌ಆರ್‌ಟಿಸಿ ಬಸ್ ನಲ್ಲಿ ಮಹಿಳೆಯರ ಉಚಿತ ಪ್ರಯಾಣಕ್ಕೆ ಜೂನ್ 11ಕ್ಕೆ ಚಾಲನೆ

Click below to Share News

ಪುತ್ತೂರು: ಜೂನ್ 11 ರಂದು ಭಾನುವಾರ ಮಧ್ಯಾಹ್ನ ಒಂದುಗಂಟೆಗೆ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿ ಒಂದಾಗಿರುವ ಮಹಿಳೆಯರಿಗೆ ಉಚಿತ ಸರಕರಿ ಬಸ್ ಪ್ರಯಾಣ (ನಮ್ಮ ಪ್ರಮಾಣ ನಿಮ್ಮ ಪ್ರಯಾಣ) ಯೋಜನೆಯ ಉದ್ಘಾಟನೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನೆರವೇರಿಸಲಿದ್ದು ಅದೇ ಸಮಯಕ್ಕೆ ಪುತ್ತೂರಿನಲ್ಲಿಯೂ ಯೋಜನೆಯ ಉದ್ಘಾಟನಾ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಲಿದ್ದು ಆ ದಿನ ವಿವಿಧ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿದೆ ಎಂದು ಪುತ್ತೂರು ಶಾಸಕರಾದ ಅಶೋಕ್ ರೈ ಹೇಳಿದರು.


ಪುತ್ತೂರಿನ ಕಾಂಗ್ರೆಸ್ ಚುನಾವಣಾ ಕಚೇರಿಯಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾಹಿತಿ ನೀಡಿದ ಶಾಸಕರು ಕಾಂಗ್ರೆಸ್ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ 5 ಉಚಿತ ಯೋಜನೆಗಳ ಭರವಸೆಯನ್ನು ನೀಡಿತ್ತು. ಈ ಪೈಕಿ ಮಹಿಳೆಯರಿಗೆ ಉಚಿತ ಬಸ್ ಪ್ರಯಣವೂ ಇತ್ತು. ಈ ಯೋಜನೆಯನ್ನು ಜೂನ್ 11 ರಂದು ಸರಕಾರ ಆರಂಭಿಸಲಿದೆ. ಪುತ್ತೂರಿನಲ್ಲಿ ಮಧ್ಯಾಹ್ನ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು. ಗ್ರಾಮಗ್ರಾಮಗಳಲ್ಲಿ ಐದು ಉಚಿತ ಯೋಜನೆಯ ಬಗ್ಗೆ ಸಾರ್ವಜನಿಕರಿಗೆ ಮತ್ತು ಮತದಾರರಿಗೆ ಮನವರಿಕೆ ಮಾಡುವ ಪ್ಲೆಕ್ಸ್‌ಗಳನ್ನು ಅಳವಡಿಸಲಾಗುವುದು ಎಂದು ಹೇಳಿದರು.

ಐದು ಬಸ್ ನಗರದೆಲ್ಲೆಡೆ ಸಂಚಾರ
ಐದು ಬಸ್ಸುಗಳು ಆದಿನ ನಗರದೆಲ್ಲೆಡೆ ಸಂಚಾರವನ್ನು ನಡೆಸಲಿದೆ. ಮಹಿಳಾ ಕಾರ್ಯಕರ್ತರು ಬಸ್ಸಲ್ಲಿ ಉಚಿತವಾಗಿ ಪ್ರಯಾಣ ಮಾಡಲಿದ್ದು ಈ ಪೈಕಿ ಒಂದು ಬಸ್ಸನ್ನು ಅಲಂಕಾರ ಮಾಡಲಾಗುತ್ತದೆ. ಐದು ಬಸ್ಸುಗಳು ಯೋಜನೆಯ ಪ್ರಚಾರಕ್ಕಾಣ ಬಳಸಲಾಗುತ್ತದೆ. ಪುತ್ತೂರು ನಗರ, ನೆಹರೂನಗರ, ಬನ್ನೂರು ಪರ್ಲಡ್ಕ, ದರ್ಬೆ, ಬೈಪಾಸ್, ಸಾಲ್ಮರ, ಕೆಮ್ಮಾಯಿ ಹೀಗೇ ನಗರದಾದ್ಯಂತ ಸಂಚಾರ ನಡೆಸಲಿದೆ. ಮಹಿಳೆಯರಿಗೆ ಉಚಿತ ಬಸ್ ಪ್ರಯಣದ ಬಗ್ಗೆ ಮನವರಿಕೆ ಮಾಡುವ ಕಾರ್ಯಕ್ರಮವು ನಡೆಯಲಿದೆ.


ಉಚಿತ ಪ್ರಯಣಕ್ಕೆ ಏನು ಬೇಕು..?

ಉಚತ ಪ್ರಯಾಣಕ್ಕೆ ಮೂರು ತಿಂಗಳ ಅವಧಿಗೆ ಆಧಾರ್ ಕಾರ್ಡು, ರೇಶನ್ ಕಾರ್ಡು ಅಥವಾ ಇತರೆ ವಾಸ್ತವ್ಯದ ದಾಖಲೆಗಳನ್ನು ಪ್ರಯಣಿಸುವ ವೇಳೆ ನಿರ್ವಾಹಕನಿಗೆ ತೋರಿಸಬೇಕು. ಮೂರು ತಿಂಗಳ ಬಳಿಕ ಸ್ಮಾರ್ಟ್ ಕರ್ಡು ರೀತಿಯಲ್ಲಿ ಪ್ರಯಾಣದ ಕಾರ್ಡನ್ನು ವಿತರಣೆ ಮಾಡಲಾಗುವುದು ಎಂದು ಡಿಪೋ ಮೆನೆಜರ್ ತಿಳಿಸಿದರು.

ಲಗೇಜ್ ಚಾರ್ಜ್ ಇರುತ್ತದೆ ಬಸ್ಸಿನಲ್ಲಿ ಪ್ರಯಾಣಿಸುವಾಗ ಲಗೇಜ್ ದರ ಈ ಹಿಂದಿನಂತೆಯೇ ಚಾಲ್ತಿಯಲ್ಲಿರುತ್ತದೆ. ಸಣ್ಣ ಪ್ರಮಣದ ಅಂದ್ರೆ ಕೈಯ್ಯಲ್ಲಿ ಹಿಡಿದುಕೊಳ್ಳುವ ಸಾಮಾನ್ಯ ಲಗೇಜ್‌ಗೆ ದರ ಇರುವುದಿಲ್ಲ ಎಂದು ಇಸ್ಮಾಯಿಲ್ ತಿಳಿಸಿದರು.


Click below to Share News

Related Articles

Leave a Reply

Your email address will not be published. Required fields are marked *

Back to top button
error: Content is protected !!