ತಾಲೂಕು ಸುದ್ದಿ

ಪುತ್ತೂರು : ಕರ್ನಾಟಕ ಪತ್ರಕರ್ತರ ಸಂಘದಿಂದ ಪತ್ರಿಕಾ ದಿನಾಚರಣೆ – ಮಾಹಿತಿ ಕಾರ್ಯಾಗಾರ.

Click below to Share News

ಪುತ್ತೂರು : ಕರ್ನಾಟಕ ಪತ್ರಕರ್ತರ ಸಂಘ ಪುತ್ತೂರು ತಾಲೂಕು,ಇದರ ಆಶ್ರಯದಲ್ಲಿ ಜಿಲ್ಲೆಯ ಪ್ರತಿಷ್ಠಿತ ವಿದ್ಯಾಸಂಸ್ಥೆ, ಪುತ್ತೂರು ಸಂತಫಿಲೋಮಿನಾ ಪದವಿಪೂರ್ವ ಕಾಲೇಜಿನ ಸಹಯೋಗದೊಂದಿಗೆ ಪತ್ರಿಕಾದಿನಾಚರಣೆ ಹಾಗೂ ಮಾಹಿತಿ ಕಾರ್ಯಾಗಾರವು ಜುಲೈ 12ರಂದು ಕಾಲೇಜಿನ ಸಿಲ್ವರ್ ಜುಬಿಲಿ ಸಭಾಂಗಣದಲ್ಲಿ ಅರ್ಥಪೂರ್ಣವಾಗಿ ನಡೆಯಿತು.

ಜ್ಯೋತಿ ಬೆಳಗಿಸು…ಮನದ ಜ್ಯೋತಿ ಬೆಳಗಿಸು ಎಂಬ,ಕಾಲೇಜಿನ ವಿದ್ಯಾರ್ಥಿನಿಯರ ಭಾವನಾತ್ಮಕ ಪ್ರಾರ್ಥನೆಯೊಂದಿಗೆ ಆರಂಭಗೊಂಡ ಕಾರ್ಯಕ್ರಮವನ್ನು ಕಾಲೇಜಿನ ಯುವ,ಕ್ರಿಯಾಶೀಲ ಸಹೃದಯಿ ಪ್ರಾಂಶುಪಾಲರಾದ ರೆ.ಫಾ.ಅಶೋಕ್ ರಾಯನ್ ಕ್ರಾಸ್ತಾ ಜ್ಯೋತಿ ಪ್ರಜ್ವಲನ ಗೊಳಿಸಿ ಶುಭಕೋರಿದರು, ಕರ್ನಾಟಕ ಪತ್ರಕರ್ತರ ಸಂಘದ ಪುತ್ತೂರು ತಾಲೂಕು ಅಧ್ಯಕ್ಷ ತಿಲಕ್ ರೈ ಕುತ್ಯಾಡಿ ಅಧ್ಯಕ್ಷತೆ ವಹಿಸಿದ್ದರು.ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ ಹರೀಶ್ ರೈ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು.ಕರ್ನಾಟಕ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಸುದೇಶ್ ಮತ್ತು ಜಿಲ್ಲಾ ಉಪಾಧ್ಯಕ್ಷ ನಮ್ಮ ಟಿ.ವಿ ಮುಖ್ಯಸ್ಥ ಡಾ.ಶಿವಶರಣ್ ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಜೊತೆಗೆ ಕಾಲೇಜಿನ ಪ್ರಥಮ ಮತ್ತು ದ್ವಿತೀಯ ಪಿ.ಯು.ಸಿಯ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಅತ್ಯಧಿಕ ಸಂಖ್ಯೆಯಲ್ಲಿ ನೆರೆದು ಕಾರ್ಯಕ್ರಮವನ್ನು ಸುಂದರಗೊಳಿಸಿದರು.ಶಿಸ್ತು,ಸ್ವಯಂ ಸೇವಾ ಮನೋಭಾವದ ವಿದ್ಯಾರ್ಥಿಗಳ ಸಮೂಹ ಮನಗೆದ್ದಿತು.

ಕಾರ್ಯಕ್ರಮದ ಮುಖ್ಯ ಮಾತುಗಳು
🔹ಬೆಳೆಯುವ ಯುವ ಪ್ರತಿಭೆಗಳು ಕ್ರಿಯಾಶೀಲರಾಗಬೇಕಾದರೆ ಇಂಥ ಕಾರ್ಯಾಗಾರಗಳಲ್ಲಿ ಭಾಗವಹಿಸ ಬೇಕಾದ ಅಗತ್ಯವಿದೆ.

🔹 ಇಂದು ಸಮೂಹ ಮಾಧ್ಯಮಗಳು ದಿನಬೆಳಗಾದರೆ ಸಾಕು ನೂರಾರು ವಿಷಯಗಳನ್ನು ಪ್ರಚುರ ಪಡಿಸುತ್ತವೆ.ಮಾಹಿತಿ ತಂತ್ರಜ್ಞಾನ ನಮ್ಮ ಅಂಗೈ ಬೆರಳತುದಿಯಲ್ಲಿದೆ.ಆದರೆ ಸುದ್ದಿ-ವರದಿಗಳ ಸತ್ಯಾಸತ್ಯತೆ ತಿಳಿಯಬೇಕಾದುದು ಬಹಳ ಮುಖ್ಯ.ಮೊಬೈಲ್,ವಾಟ್ಸಾಪ್,ಫೇಸ್ಬುಕ್,ಟ್ವಿಟ್ಟರ್ ಗಳ ವರದಿಯೇ ಮುಖ್ಯವಲ್ಲ.ಕ್ಷಣ ಮಾತ್ರದಲ್ಲಿ ಬೇಕಾದ,ಬೇಡವಾದ ಎಲ್ಲಾ ವೀಡಿ,ವರದಿಗಳನ್ನು ಹರಡಿ ಬಿಡುತ್ತವೆ.ಆದರೆ ನಮ್ಮ ವಿದ್ಯಾರ್ಥಿಗಳು ಮರುದಿನ ಬರುವ ಸಚಿತ್ರ ವರದಿಗಳನ್ನು ಓದುವ ಅಭಿರುಚಿ ಬೆಳೆಸಬೇಕಾದುದು ಅತಿ ಮುಖ್ಯ.

🔹 ಪತ್ರಿಕೆಗಳು ನಮ್ಮ ಸಮಾಜದ ಸಮಸ್ಯೆಗಳಿಗೆ ಹಿಡಿದ ಕೈಗನ್ನಡಿಯಾಗಿದೆ.ಭಾಷೆ ಯಾವುದೇ ಇರಲಿ ದಿನದಲ್ಲಿ ಕನಿಷ್ಠ ಹತ್ತು ಹದಿನೈದು ನಿಮಿಷಗಳ ಕಾಲ ಪತ್ರಿಕೆ ಓದಬೇಕು.ಮುಖ್ಯಾಂಶಗಳನ್ನು ಸಣ್ಣ ನೋಟ್ ಬುಕ್ ನಲ್ಲಿ ದಿನ-ದಿನಾಂಕಗಳೊಂದಿಗೆ ಬರೆದಿಡುವ ಹವ್ಯಾಸವನ್ನು ನಮ್ಮ ವಿದ್ಯಾರ್ಥಿ ಸಮುದಾಯ ಬೆಳೆಸಿಕೊಂಡಾಗ ಇಂಥ ದಿನಾಚರಣೆಗಳಿಗೊಂದು ಅರ್ಥ ಬರುವುದು.

🔹 ಸಮಾಜಕ್ಕೆ ಬೆಳಕು ನೀಡಬೇಕಾದ ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣಗಳನ್ನು ಹಿತ-ಮಿತವಾಗಿ ಬಳಸುವುದು ಆರೋಗ್ಯ ಪೂರ್ಣ ಬೆಳವಣಿಗೆಯಾಗಿದೆ.

🔹 ಸಮಾಜದ ಓರೆಕ್ಕೋರೆ ತಿದ್ದುವ ಭವಿಷ್ಯದ ನಾಯಕರಾಗುವ ಯುವ ಸಮುದಾಯ ಹೆತ್ತವರ,ಗುರು-ಹಿರಿಯರ ಕನಸುಗಳಿಗೆ ಸುಂದರ ರೂಪ ಕೊಡುವ ರೂವಾರಿಗಳಾಗಬೇಕು.

ಕಾರ್ಯಕ್ರಮದಲ್ಲಿ ಸುದ್ದಿಬಿಡುಗಡೆ ಸೇರಿದಂತೆ ಹಲವು ಪತ್ರಿಕೆಗಳ ವರದಿಗಾರರು,ಸಂಪಾದಕರು,ಚಾನೆಲ್ ಮುಖ್ಯಸ್ಥರು,ಪತ್ರಿಕಾ ಸಂಘದ ವಿವಿಧ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಆರಂಭದಲ್ಲಿ ಉಪನ್ಯಾಸಕ ಶರತ್ ಆಳ್ವ ಚನಿಲ ಎಲ್ಲರಿಗೂ ಸ್ವಾಗತ ಕೋರಿದರು, ಉಪನ್ಯಾಸಕಿ ಸುಮನ ಕೆ ಸುಂದರವಾಗಿ ನಿರೂಪಿಸಿದ ಕಾರ್ಯಕ್ರಮದಲ್ಲಿ ,ಕೊನೆಗೆ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಉಪನ್ಯಾಸಕ ಹಾಗೂ ಸುದ್ದಿಬಿಡುಗಡೆಯ ಬರಹಗಾರ ಲಕ್ಷ್ಮೀಕಾಂತ ರೈ ಅನಿಕೂಟೇಲು ವಂದನಾರ್ಪಣೆಗೈದರು.

✍️ನಾರಾಯಣ ರೈ ಕುಕ್ಕುವಳ್ಳಿ.


Click below to Share News

Related Articles

Leave a Reply

Your email address will not be published. Required fields are marked *

Back to top button
error: Content is protected !!