ತಾಲೂಕು ಸುದ್ದಿ

ಪುತ್ತೂರು: ವಿವೇಕಾನಂದ ಪಾಲಿಟೆಕ್ನಿಕ್ ನ ನಿವೃತ್ತ ಪ್ರಾಂಶುಪಾಲರಾದ, ಇಂಜಿನಿಯರ್ ಗೋಪಿನಾಥ್ ಶೆಟ್ಟಿ ನಿಧನ.!!

Click below to Share News

ಪುತ್ತೂರು : ವಿವೇಕಾನಂದ ಪಾಲಿಟೆಕ್ನಿಕ್ ನ ನಿವೃತ್ತ ಪ್ರಾಂಶುಪಾಲರಾದ ಇಂಜಿನಿಯರ್ ಗೋಪಿನಾಥ್ ಶೆಟ್ಟಿ(60)ಯವರು ದಿಡೀರ್ ಅಸ್ವಸ್ಥಗೊಂಡು ಮಾ 13ರ ನಸುಕಿನ ಜಾವ 2 ಗಂಟೆ ಸುಮಾರಿಗೆ ನಿಧನ ಹೊಂದಿದ್ದಾರೆ.

ರಾತ್ರಿ ಊಟ ಮಾಡಿ ಮಲಗಿದ ಅವರ ಆರೋಗ್ಯದಲ್ಲಿ ನಸುಕಿನ ಜಾವ 2 ಗಂಟೆ ಸುಮಾರಿಗೆ ಏರು ಪೇರು ಉಂಟಾಗಿದ್ದು, ಬಳಿಕ ಕೆಲವೇ ಕ್ಷಣಗಳಲ್ಲಿ ನಿಧನ ಹೊಂದಿರುವುದಾಗಿ ಅವರ ಆಪ್ತ ವಲಯದವರು ತಿಳಿಸಿದ್ದಾರೆ.
ನಿನ್ನೆ ರಾ ತ್ರಿಯವರೆಗೂ ಕ್ರಿಯಾಶೀಲರಾಗಿ ವಿವಿಧ ಚಟುವಟಿಕೆಗಳಲ್ಲಿ ನಿರತರಾಗಿದ್ದ ಗೋಪಿನಾಥ್ ಶೆಟ್ಟಿಯವರು ಹೃದಯಘಾತಕ್ಕೆ ಒಳಗಾಗಿ ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ.
1986ರಲ್ಲಿ ವಿವೇಕಾನಂದ ಪಾಲಿಟೆಕ್ನಿಕ್ ಆರಂಭಗೊಂಡಿದ್ದು, 1987ರಲ್ಲಿ ಅದರ ಪ್ರಾಂಶುಪಾಲರಾಗಿ ಗೋಪಿನಾಥ್ ಶೆಟ್ಟಿಯವರು ನೇಮಕಗೊಂಡಿದ್ದರು. ಅದಾದ ಬಳಿಕ ಸುದೀರ್ಘ 35 ವರ್ಷಗಳ ಕಾಲ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ 2022 ರಲ್ಲಿ ನಿವೃತ್ತರಾಗಿದ್ದರು. ಈ ಮೂಲಕ ವಿವೇಕಾನಂದ ಪಾಲಿಟೆಕ್ನಿಕ್ ನ ಆಧಾರ ಸ್ಥಂಭವಾಗಿದ್ದರು. ಆದರ ಆರಂಭದ ಕಷ್ಟದ ದಿನಗಳಿಂದ ಅದನ್ನು ಉತ್ತಮ ಶಿಕ್ಷಣ ಸಂಸ್ಥೆಯಾಗಿ ರೂಪಿಸುವಲ್ಲಿ ಗೋಪಿನಾಥ್ ಶೆಟ್ಟಿಯವರ ಪಾತ್ರ ಹಿರಿದು.
ಖ್ಯಾತ ಇಂಜಿನಿಯರ್ ಆಗಿದ್ದ ಇವರು ವಿವೇಕಾನಂದ ವಿದ್ಯಾಸಂಸ್ಥೆಗಳ ಸಹಿತ ಜಿಲ್ಲೆ ರಾಜ್ಯದಲ್ಲಿ ಸಾವಿರಾರು ಕಟ್ಟಡಗಳಿಗೆ ಇಂಜಿನಿಯರ್ ಪ್ಲಾನ್ ನೀಡಿದ್ದಾರೆ. ವಿವೇಕಾನಂದ ಇಂಜಿನಿಯ‌ರ್ ಕಾಲೇಜು ಇವರ ಪ್ಲಾನ್ ನಂತೆ ನಿರ್ಮಿಸಲಾಗಿದೆ. ನೂತನವಾಗಿ ಆರಂಭಗೊಂಡು ಪುತ್ತೂರಿನ ಮೊದಲ ಬಿ – ಫಾರ್ಮಾ ಕಾಲೇಜ್ ಆದ ವಿವೇಕಾನಂದ ಇನಿಸ್ಟಿಟ್ಯೂಟ್ ಆಫ್ ಫಾರ್ಮಸೂಟಿಕಲ್ ಸೈನ್ಸ್ ನ ಅಧ್ಯಕ್ಷರಾಗಿ ಕಳೆದೊಂದು ವರ್ಷದಿಂದ ಸೇವೆ ಸಲ್ಲಿಸುತ್ತಿದ್ದಾರೆ.
ರಾಷ್ಟ್ರೀಯ ಸ್ವಯಂಸೇವಕ ಸಂಘದಲ್ಲೂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಅವರು, ಪ್ರಸ್ತುತ ಪುತ್ತೂರು ನಗರ ಸರ ಸಂಘ ಚಾಲಕ್ ಆಗಿ ಜವಬ್ದಾರಿ ನಿರ್ವಹಿಸುತ್ತಿದ್ದರು. ಪ್ರಧಾನಮಂತ್ರಿ ಜನೌಷಧಿ ಕೇಂದ್ರದ ಪುತ್ತೂರು ಭಾಗದ ಮೇಲುಸ್ತುವಾರಿಯಾಗಿದ್ದ ಅವರು ಈ ಭಾಗದಲ್ಲಿ ಹತ್ತು ಹಲವು ಜನೌಷಧಿ ಕೇಂದ್ರಗಳ ಆರಂಭಕ್ಕೆ ಕಾರಣಿಭೂತರಾಗಿದ್ದರು.
ಮೂಲತ: ವಿಟ್ಲದ ಪೆರುವಾಯಿಯವರಾದ ಗೋಪಿನಾಥ ಶೆಟ್ಟಿಯವರು, ಪ್ರಸ್ತುತ ನೆಹರೂ ನಗರದ ಬಲಮುರಿ ಗಣಪತಿ ದೇವಸ್ಥಾನದ ಬಳಿ ವಾಸಿಸುತ್ತಿದ್ದರು. ಮೃತರು ಪತ್ನಿ, ಓರ್ವ ಪುತ್ರ, ಅಪಾರ ಶಿಷ್ಯವರ್ಗ, ಬಂಧು ಮಿತ್ರರನ್ನು ಅಗಲಿದ್ದಾರೆ.


Click below to Share News

Related Articles

Leave a Reply

Your email address will not be published. Required fields are marked *

Back to top button
error: Content is protected !!