ತಾಲೂಕು ಸುದ್ದಿ
ಸುಳ್ಯ : ಆಟೋ ರಿಕ್ಷಾ – ಓಮ್ನಿ ಕಾರು ಢಿಕ್ಕಿ: ರಿಕ್ಷಾ ಚಾಲಕ ಬಾಬು ಪಾಟಾಳಿ ಮೃತ್ಯು.
![](https://veekshakanews.com/wp-content/uploads/2023/11/1699236772140-4-780x470.jpg)
ಸುಳ್ಯ: ಅಟೋ ರಿಕ್ಷಾಕ್ಕೆ ಓಮ್ಮಿ ಢಿಕ್ಕಿ ಹೊಡೆದು ರಿಕ್ಷಾ ಚಾಲಕ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟ ಘಟನೆ ಹಳೆಗೇಟಿನಲ್ಲಿ ನ.5ರಂದು ರಾತ್ರಿ ಸಂಭವಿಸಿದೆ.
![](https://veekshakanews.com/wp-content/uploads/2023/11/1699236772140-1.jpg)
ಜಾಲ್ಲೂರಿನಿಂದ ಸುಳ್ಯಕ್ಕೆ ಪ್ರಯಾಣಿಕರೋರ್ವರನ್ನು ಬಿಟ್ಟು ಹಿಂತಿರುಗುತ್ತಿದ್ದ ಜಾಲ್ಲೂರು ಗ್ರಾಮದ ಅರಿಯಡ್ಕದ ಬಾಬು ಪಾಟಾಳಿ ಎಂಬವರು ಚಲಾಯಿಸುತ್ತಿದ್ದ ಅಟೋರಿಕ್ಷಾ ಹಳೆಗೇಟು ಪೆಟ್ರೋಲ್ ಪಂಪ್ ಬಳಿ ಮುಂಭಾಗದಿಂದ ಬರುತ್ತಿದ್ದ ಓಮ್ಮಿಗೆ ಢಿಕ್ಕಿ ಹೊಡೆದಿದ್ದು, ಚಾಲಕ ಬಾಬು ಪಾಟಾಳಿ ಅವರುಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟಿರುವುದಾಗಿ ತಿಳಿದುಬಂದಿದೆ. ಸಹ ಪ್ರಯಾಣಿಕ ಗಾಯಗೊಂಡಿದ್ದು,ಸುಳ್ಯದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ.