ತಾಲೂಕು ಸುದ್ದಿ

ಸುಳ್ಯ: ಭಾರಿ ಮಳೆಗೆ ಏಕಾಏಕಿ ಕುಸಿದ ಭೂಮಿ..!

Click below to Share News

ಸುಳ್ಯ : ಮಳೆ ಬರುವ ಸಮಯದಲ್ಲಿ ಎಲ್ಲರೂ ಹೋಟೆಲ್ ಒಳಗೆ ಬಿಸಿ ಕಾಫಿ ಸವಿಯುತ್ತಿದ್ದರೆ ಇತ್ತ ಹೊರಗಡೆ ಬಾವಿಯಾಕೃತಿಯ ಹೊಂಡ ಬಾಯಿ ತೆರೆದುಕೊಂಡಿತು. ಒಂದು ಕ್ಷಣ ಎಲ್ಲರೂ ಅಚ್ಚರಿಗೊಳಗಾದರು. ಇದ್ದಕ್ಕಿದ್ದಂತೆ ಗುಂಡಿ ನಿರ್ಮಾಣವಾಗಿದ್ದು ಹೇಗಾಯಿತು ಅನ್ನುವುದೇ ಕೌತುಕದ ಪ್ರಶ್ನೆಯಾಗಿದೆ.

ಸುಳ್ಯ ಪರಿವಾರಕಾನ ಉಡುಪಿ ಗಾರ್ಡನ್ ಹೋಟೆಲ್ ಮುಂಭಾಗದಲ್ಲಿ ಸುಮಾರು ಹತ್ತು ಅಡಿಯಷ್ಟು ಉದ್ದಕ್ಕೆ ಗುಂಡಿ ನಿರ್ಮಾಣವಾಗಿದೆ ಎಂದು ತಿಳಿದು ಬಂದಿದೆ.ಈ ಫೋಟೋಗಳು ಎಲ್ಲ ಕಡೆ ವೈರಲ್ ಆಗುತ್ತಿದೆ. ಪಕ್ಕದಲ್ಲಿ ಇರುವ ವಿದ್ಯುತ್ ಕಂಬ ಬೀಳುವ ಆತಂಕ ಎದುರಾಗಿದೆ. ಪ್ರತಿ ದಿನವೂ ಹೋಟೆಲ್ ಗೆ ಬರುವ ಕಾರುಗಳು ಅಲ್ಲಿ ಕೂಡ ಪಾರ್ಕಿಂಗ್ ಮಾಡುತ್ತಿದ್ದರು. ಆದರೆ ಇಂದು ಅದೃಷ್ಟವಶಾತ್ ಯಾರೂ ಇರಲಿಲ್ಲ ಎಂದು ತಿಳಿದು ಬಂದಿದೆ. ಸ್ಥಳೀಯರು ಮೆಸ್ಕಾಂನವರಿಗೆ ಮಾಹಿತಿ ನೀಡಿದ್ದಾರೆ. ಯಾವುದೇ ಹಾನಿ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.


Click below to Share News

Related Articles

Leave a Reply

Your email address will not be published. Required fields are marked *

Back to top button
error: Content is protected !!