ತಾಲೂಕು ಸುದ್ದಿ

ಕೇರಳದಲ್ಲಿ ಸಹೋದರನನ್ನು ಕೊಲೆಗೈದು ಪುತ್ತೂರಿನಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ವಶಕ್ಕೆ ಪಡೆದ ಪೊಲೀಸರು.

Click below to Share News

ಪುತ್ತೂರು : ಕೊಲೆ ಆರೋಪಿಯೋರ್ವನನ್ನು ಪೊಲೀಸರು ಬಂಧಿಸಿದ ಘಟನೆ ಪುತ್ತೂರಿನಲ್ಲಿ ನಡೆದಿದೆ.
ಕೇರಳದಲ್ಲಿ ಕೊಲೆ ಮಾಡಿ ಪುತ್ತೂರಿನಲ್ಲಿ ಬಂದು ತಲೆಮರೆಸಿಕೊಂಡಿದ್ದ ವ್ಯಕ್ತಿಯನ್ನು ಕೇರಳ ಪೊಲೀಸರು ವಶಕ್ಕೆ ಪಡೆದ ಘಟನೆ ಕೊಂಬೆಟ್ಟು ಬಳಿ ನಡೆದಿದೆ.
ಆರೋಪಿಯು ಕೇರಳದಲ್ಲಿ ಸಹೋದರನನ್ನು ಕೊಲೆಗೈದು ಪುತ್ತೂರಿನಲ್ಲಿ ತಲೆಮರೆಸಿಕೊಂಡಿದ್ದು, ಈ ಬಗ್ಗೆ ಮಾಹಿತಿ ತಿಳಿದ ಕೇರಳ ಪೊಲೀಸರು ಪುತ್ತೂರಿಗೆ ಆಗಮಿಸಿದ್ದರು.

ಆರೋಪಿಯನ್ನು ಬಂಧಿಸುವಲ್ಲಿ ಪುತ್ತೂರು ನಗರ ಠಾಣಾ ಪೊಲೀಸರು ಸಹಕರಿಸಿದ್ದು, ಆರೋಪಿಯು ದೇವಸ್ಥಾನದ ಸಮೀಪವಿರುವ ಚರಂಡಿಗಳಲ್ಲೆಲ್ಲಾ ಬಿದ್ದು ತಪ್ಪಿಸಿಕೊಳ್ಳಲು ಯತ್ನಿಸಿದ್ದು, ನಗರ ಠಾಣಾ ಪೊಲೀಸರು, ಕೇರಳ ಪೊಲೀಸರ ಜೊತೆ ಕಾರ್ಯಚರಣೆ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.


Click below to Share News

Related Articles

Leave a Reply

Your email address will not be published. Required fields are marked *

Back to top button
error: Content is protected !!