ಸಮಗ್ರ ಸುದ್ದಿ

ಲಾರೆನ್ಸ್ ಬಿಷ್ಣೋಯ್ ನಟ ಸಲ್ಮಾನ್ ಖಾನ್ ಹತ್ಯೆಗೆ ಬೆದರಿಕೆ ಹಾಕಲು ಪ್ರಮುಖ ಕಾರಣವೇನು ಗೊತ್ತಾ..? ಬಿಷ್ಣೋಯ್ ಸಮುದಾಯಕ್ಕೆ ಕೃಷ್ಣ ಮೃಗವೇಕೆ ಪವಿತ್ರ.?

ಭಾರತ (India) ದೇಶದಲ್ಲಿ ಕಪ್ಪು ಜಿಂಕೆ ಅಂದರೆ ಕೃಷ್ಣ ಮೃಗವು (krishna mruga) ಬಹಳ ಹಿಂದಿನಿಂದಲೂ ಚರ್ಚೆಯ ವಿಷಯವಾಗಿದೆ. ದೇಶದ ಚಿಕ್ಕ ಮಕ್ಕಳಿಗೂ ಕಪ್ಪು ಜಿಂಕೆ ಮತ್ತು ಬಿಷ್ಣೋಯ್ ಸಮಾಜದ (Bishnoi community) ಪರಿಚಯವಿದೆ. ಆದರೆ ಈ ಸಮುದಾಯಕ್ಕೆ ಜಿಂಕೆಗಳು ಯಾಕೆ ಅಷ್ಟೊಂದು ವಿಶೇಷವಾದದ್ದು ಗೊತ್ತಾ?
ಎರಡೂವರೆ ದಶಕಗಳ ಹಿಂದೆ ಬಾಲಿವುಡ್ (Bollywood) ಬಾಡಿಗಾರ್ಡ್ ಸಲ್ಮಾನ್ ಖಾನ್ (Salman Khan) ಅವರ ಕೃಷ್ಣಮೃಗ ಬೇಟೆಯ ನಂತರ ಬಿಷ್ಣೋಯ್ ಸಮುದಾಯದಲ್ಲಿ ಅವರ ಮೇಲೆ ಆಕ್ರೋಶವಿದೆ. ಈ ಎಲ್ಲದರ ಕುರಿತು ಇಲ್ಲಿದೆ ಸಂಪೂರ್ಣ ಮಾಹಿತಿ.

ಕಳೆದ 25 ವರ್ಷಗಳಿಂದ ವನ್ಯಜೀವಿಗಳ ಕುರಿತು ಕೆಲಸ ನಿರ್ವಹಿಸುತ್ತಿರುವ ನೇಚರ್, ಎನ್ವಿರಾನ್ಮೆಂಟ್ ಮತ್ತು ವೈಲ್ಡ್ ಲೈಫ್ ಸೊಸೈಟಿಯ ಪ್ರಾಜೆಕ್ಟ್ ಮ್ಯಾನೇಜರ್ ಅಭಿಷೇಕ್ ಅವರು ಕೃಷ್ಣಮೃಗಗಳ ವಿಶೇಷ ಮಾಹಿತಿಯನ್ನು ಇಲ್ಲಿ ಹಂಚಿಕೊಂಡಿದ್ದಾರೆ. ಕಪ್ಪು ಜಿಂಕೆಯನ್ನೇ ಕೃಷ್ಣ ಮೃಗ ಎಂದು ಕರೆಯಲಾಗುತ್ತದೆ. ಇದನ್ನು ಇಂಗ್ಲಿಷ್‌ನಲ್ಲಿ ಬ್ಲ್ಯಾಕ್ ಬಕ್ ಎಂದು ಕರೆಯಲಾಗುತ್ತದೆ ಎಂದು ಅಭಿಷೇಕ್ ಹೇಳುತ್ತಾರೆ.
ಸಾಮಾನ್ಯ ಜಿಂಕೆಯ ಕೊಂಬುಗಳು ಮರದ ಕೊಂಬೆಗಳಂತೆ ಇದ್ದರೆ, ಕೃಷ್ಣ ಮೃಗ ಅಂದರೆ ಕಪ್ಪು ಜಿಂಕೆಯ ಕೊಂಬುಗಳು ನೇರವಾಗಿರುತ್ತವೆ. ಇದರೊಂದಿಗೆ ಸಾಮಾನ್ಯ ಜಿಂಕೆಗಳ ಕೊಂಬುಗಳು ತಾತ್ಕಾಲಿಕವಾಗಿದ್ದು, ವರ್ಷಕ್ಕೊಮ್ಮೆ ಉದುರಿಹೋಗುತ್ತವೆ. ಆದರೆ, ಕಪ್ಪು ಜಿಂಕೆಗಳ ಕೊಂಬುಗಳು ಶಾಶ್ವತವಾಗಿದ್ದು, ಯಾವುದೇ ಋತುವಿನಲ್ಲಿಯು ಆದರ ಕೊಂಬುಗಳು ಬೀಳುವುದಿಲ್ಲ.
ಸಾಮಾನ್ಯ ಜಿಂಕೆಗಳ ಬಣ್ಣ ಬಾಲ್ಯದಿಂದಲೂ ಕಂದು, ತಿಳಿ ಕಂದು, ಗಾಢ ಕಂದು ಇತ್ಯಾದಿಗಳಾಗಿದ್ದರೆ, ಕಪ್ಪು ಜಿಂಕೆಯ ಬಣ್ಣವು ಬಾಲ್ಯದಿಂದಲೂ ತಿಳಿ ಕಂದು ಮತ್ತು ಆದಕ್ಕೆ ವಯಸ್ಸಾದಂತೆ ಕಡು ಕಪ್ಪು ಬಣ್ಣಕ್ಕೆ ತಿರುಗುತ್ತದೆ. ಇಲ್ಲಿ ಗಮನಿಸಬೇಕಾದ ಇನ್ನೊಂದು ಅಂಶವೆಂದರೆ ಹೆಣ್ಣು ಕೃಷ್ಣ ಜಿಂಕೆಯು ಬಾಲ್ಯದಿಂದಲೂ ಎಲ್ಲಾ ಹಂತಗಳಲ್ಲಿ ಕಂದು ಬಣ್ಣದ್ದಾಗಿದೆ ಮತ್ತು ಗಂಡಿಗೆ ಹೋಲಿಸಿದರೆ ಕೊಂಬುಗಳನ್ನು ಸಹ ಹೊಂದಿರುವುದಿಲ್ಲ ಎಂದರು.

ಅಭಿಷೇಕ್ ಅವರ ಪ್ರಕಾರ, ಸಾಮಾನ್ಯ ಜಿಂಕೆ ಕುಟುಂಬವು ಚೀತಾಲ್, ಸಾಂಬಾರ್, ಹಾಗ್ ಜಿಂಕೆ, ಬಾರ್ಕಿಂಗ್ ಜಿಂಕೆ, ಬರ್ಹಸಿಂಗ ಇತ್ಯಾದಿಗಳನ್ನು ಒಳಗೊಂಡಿದೆ. ಅದರೆ, ಕೃಷ್ಣ ಜಿಂಕೆಯ ಕುಟುಂಬದಲ್ಲಿ ಚೌಸಿಂಗ, ನೀಲಗೈ, ಚಿಂಕಾರ ಎಂಬ ಇತ್ಯಾದಿ ಗುಂಪುಗಳಿವೆ. ವಿಶೇಷವೆಂದರೆ ಸಾಮಾನ್ಯ ಜಿಂಕೆ ಮತ್ತು ಕೃಷ್ಣ ಜಿಂಕೆಗಳೆರಡೂ ದೇಶದ ಬಹುತೇಕ ಭಾಗಗಳಲ್ಲಿ ಕಂಡುಬರುತ್ತವೆ. ರಾಜಸ್ಥಾನಕ್ಕೆ ಸಂಬಂಧಿಸಿದಂತೆ, ಕೃಷ್ಣ ಮೃಗ(ಜಿಂಕೆ)ವನ್ನು ಬಿಷ್ಣೋಯ್ ಸಮುದಾಯವು ಹೆಚ್ಚಾಗಿ ಮುದ್ದುಮಾಡಿ ಪ್ರೀತಿಯಿಂದ ಬೆಳೆಸುತ್ತದೆ.
ಹೆಣ್ಣು ಕೃಷ್ಣ ಮೃಗ ಸತ್ತಾಗಲೆಲ್ಲಾ ಬಿಷ್ಣೋಯಿ ಸಮುದಾಯದ ತಾಯಂದಿರು ಅದರ ಮರಿಗಳಿಗೆ ಹಾಲುಣಿಸುತ್ತಾರೆ ಎಂದು ಹೇಳಲಾಗುತ್ತದೆ. ಇಂತಹ ಹೊತ್ತಿನಲ್ಲಿ ಬಿಷ್ಣೋಯಿ ಸಮಾಜ ಯಾವುದೇ ಕಾರಣಕ್ಕೂ ಕೃಷ್ಣ ಮೃಗದ ಸಾವನ್ನು ಸಹಿಸಲಾರದು. ಇದೇ ಸಂದರ್ಭದಲ್ಲಿ 1998 ರಲ್ಲಿ “ಹಮ್ ಸಾಥ್ ಸಾಥ್ ಹೈ” ಚಿತ್ರದ ಚಿತ್ರೀಕರಣದ ಸಮಯದಲ್ಲಿ, ಸೆಪ್ಟೆಂಬರ್ 27-28 ರ ರಾತ್ರಿ, ಘೋಡಾ ಫಾರ್ಮ್ ಹೌಸ್‌ನಲ್ಲಿ ಕೃಷ್ಣ ಮೃಗವನ್ನು ಬೇಟೆಯಾಡಲಾಗಿದೆ. ಈ ಪ್ರಕರಣದಲ್ಲಿ ನಟ ಸಲ್ಮಾನ್ ಖಾನ್ ಪ್ರಮುಖ ಆರೋಪಿ ಎಂದು ಗುರುತಿಸಲಾಗಿದೆ.

ಇದನ್ನು ಓದಿ: ಅಶೋಕ‌ ಜನ-ಮನ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ,ಉಪಮುಖ್ಯಮಂತ್ರಿಗೆ ಆಹ್ವಾನ.

ಎರಡೂವರೆ ದಶಕಗಳ ನಂತರವೂ ಬಿಷ್ಣೋಯ್ ಸಮಾಜವು ಸಲ್ಮಾನ್ ಖಾನ್ ವಿರುದ್ಧ ಅಸಮಾಧಾನಗೊಳ್ಳಲು ಇವುಗಳೆ ಪ್ರಮುಖ ಕಾರಣವಾಗಿದೆ. 2018 ರಲ್ಲಿ, ಜೋಧ್‌ಪುರದಲ್ಲಿ ಸಲ್ಮಾನ್ ಖಾನ್ ಅವರು ಈ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಹಾಜರಾಗಲು ಬಂದಾಗ, ಬಿಷ್ಣೋಯ್ ಸಮುದಾಯಕ್ಕೆ ಸೇರಿರುವ ಲಾರೆನ್ಸ್ ಬಿಷ್ಣೋಯ್ ಅವರು, ಸಲ್ಮಾನ್ ಖಾನ್ ಅವರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದರು. ಅಂದಿನಿಂದಲೂ ಈ ಪ್ರಕರಣವು ಸಲ್ಮಾನ್ ಖಾನ್ ಮತ್ತು ಲಾರೆನ್ಸ್ ಬಿಷ್ಣೋಯ್ ನಡುವೆ ಚರ್ಚೆಯ ವಿಷಯವಾಗಿದೆ.

Related Articles

Leave a Reply

Your email address will not be published. Required fields are marked *

/** * External dependencies */ import { Component } from 'react'; class CheckoutSlotErrorBoundary extends Component { state = { errorMessage: '', hasError: false }; static getDerivedStateFromError( error ) { if ( typeof error.statusText !== 'undefined' && typeof error.status !== 'undefined' ) { return { errorMessage: ( <> { error.status } { ': ' + error.statusText } ), hasError: true, }; } return { errorMessage: error.message, hasError: true }; } render() { const { renderError } = this.props; const { errorMessage, hasError } = this.state; if ( hasError ) { if ( typeof renderError === 'function' ) { return renderError( errorMessage ); } return

{ errorMessage }

; } return this.props.children; } } export default CheckoutSlotErrorBoundary;
error: Content is protected !!