ಕ್ರೀಡೆ

IPL 2023 : 5ನೇ ಬಾರಿ ಚಾಂಪಿಯನ್ಸ್ ಆದ ಚೆನ್ನೈ ಸೂಪರ್ ಕಿಂಗ್ಸ್

IPL 2023: ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಗುಜರಾತ್ ಟೈಟಾನ್ಸ್ 20 ಓವರ್‌ಗಳಲ್ಲಿ 4 ವಿಕೆಟ್‌ಗೆ 214 ರನ್ ಗಳಿಸಿತು. ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿದರುಗುಜರಾತ್ ಆರಂಭಿಕರಾದ ಶುಭಮನ್ ಗಿಲ್ ಮತ್ತು ಸಾಹಾ ಟೈಟಾನ್ಸ್‌ಗೆ ಉತ್ತಮ ಆರಂಭ ನೀಡಿದರು.

ಮಳೆಯಿಂದಾಗಿ ಪಂದ್ಯ 12.10ಕ್ಕೆ ಆರಂಭವಾಯಿತು. 2 ಗಂಟೆಗೂ ಹೆಚ್ಚು ವಿಳಂಬದಿಂದಾಗಿ 5 ಓವರ್‌ಗಳಿಗೆ ಕಡಿತಗೊಳಿಸಲಾಯಿತು. ಇದರಿಂದಾಗಿ ಚೆನ್ನೈ ತಂಡ 15 ಓವರ್ನಲ್ಲಿ 171 ರನ್ ಟಾರ್ಗೆಟ್ ಬೆನ್ನಟ್ಟಿತು. ಚೆನ್ನೈ ಪರ ಆರಮಭಿಕರಾಗಿ ಕಣಕ್ಕಿಳಿದ ರುತುರಾಜ್ ಗಾಯಕ್ವಾಡ್ ಮತ್ತು ಡ್ವೈನ್ ಕಾನ್ವೆ ಭರ್ಜರಿ ಬ್ಯಾಟಿಂಗ್ ಮೂಲಕ ತಂಡದ ಮೊತ್ತವನ್ನು ಆರಮಭದಿಂದಲೇ ಹೆಚ್ಚಿಸಿದರು. ಈ ಜೋಡಿ 74 ರನ್ ಗಳ ಜೊತಯಟ ಆಡಿತ್ತು.

ಈ ವೇಳೆ ಡ್ವೈನ್ ಕಾನ್ವೆ 25 ಎಸೆತದಲ್ಲಿ 2 ಸಿಕ್ಸ್ 4 ಫೊರ್ ಮೂಲಕ 47 ರನ್ ಮತ್ತು ಗಾಯಕ್ವಾಡ್ 16 ಎಸೆತದಲ್ಲಿ 1 ಸಿಕ್ಸ್ ಮತ್ತು 3 ಫೋರ್ ಮೂಲಕ 26 ರನ್ ಗಳಿಸಿದರು. ಬಳಿಕ ಬಂದ ಅಂಜಿಕ್ಯಾ ರಹಾನೆ ಭರ್ಜರಿ ಬ್ಯಾಟಿಂಗ್ ಮಾಡುವ ಮೂಲಕ ಕೇವಲ 13 ಎಸೆತದಲ್ಲಿ 2 ಸಿಕ್ಸ್ 2 ಬೌಂಡರಿ ಮೂಲಕ 27 ರನ್ ಸಿಡಿಸಿ ಮೋಹಿತ್ ಶರ್ಮಾ ಬೌಲಿಂಗ್ನಲ್ಲಿ ವಿಕೆಟ್ ಒಪ್ಪಿಸಿದರು.
ತಮ್ಮ ಐಪಿಎಲ್ ವೃತ್ತಿಜೀವನದ ಕೊನೆಯ ಪಂದ್ಯವಾಡಿದ ಅಂಬಾಡಿ ರಾಯಡು 8 ಚೆಂಡು ಬಳಸಿ 2 ಸಿಕ್ಸ್ ಮತ್ತು 1 ಫೋರ್ ಮೂಲಕ 19 ರನ್ ಗಳಿಸಿ ಔಟ್ ಆದರು. ಬಳಿಕ ಬಂದ ಎಂಎಸ್ ಧೋನಿ ಮೇಲೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆಗಳಿದ್ದವು. ಆದರೆ ಧೋನಿ ಮೊದಲ ಎಸೆತದಲ್ಲಿಯೆ ಕ್ಯಾಚ್ ನೀಡಿ ಔಟ್ ಆಗುವ ಮೂಲಕ ಕೋಟ್ಯಾಂತರ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದರು.

ಶತಕ ವಂಚಿತರಾದ ಸಾಯಿ ಸುದರ್ಶನ್:
ಇನ್ನು, ಯುವ ಆಟಗಾರ ಸಾಯಿ ಸುದರ್ಶನ್ (47 ಎಸೆತಗಳಲ್ಲಿ 96; 8 ಬೌಂಡರಿ, 6 ಸಿಕ್ಸರ್) ಸೂಪರ್ ಬ್ಯಾಟಿಂಗ್ ಮೂಲಕ ಮಿಂಚಿದರು. ಆರಂಭಿಕರಾಗಿ ಕಣಕ್ಕಿಳಿದ ವೃದ್ಧಿಮಾನ್ ಸಹಾ (39 ಎಸೆತಗಳಲ್ಲಿ 54; 5 ಬೌಂಡರಿ, 1 ಸಿಕ್ಸರ್) ಅರ್ಧಶತಕದೊಂದಿಗೆ ಮಿಂಚಿದರು. ಮತ್ತೋರ್ವ ಆರಂಭಿಕ ಆಟಗಾರ ಶುಭಮನ್ ಗಿಲ್ (20 ಎಸೆತಗಳಲ್ಲಿ 39; 7 ಬೌಂಡರಿ) ಇರುವವರೆಗೂ ಆಕ್ರಮಣಕಾರಿ ಆಟವಾಡಿದರು. ಕೊನೆಯಲ್ಲಿ ಹಾರ್ದಿಕ್ ಪಾಂಡ್ಯ (12 ಎಸೆತಗಳಲ್ಲಿ ಔಟಾಗದೆ 21; 2 ಸಿಕ್ಸರ್) ಮಿಂಚಿದರು. ಚೆನ್ನೈ ಬೌಲರ್ ಪತಿರಾನ ಎರಡು ವಿಕೆಟ್ ಪಡೆದರು. ಜಡೇಜಾ ಮತ್ತು ದೀಪಕ್ ಚಹಾರ್ ತಲಾ ಒಂದು ವಿಕೆಟ್ ಪಡೆದರು.

ಚೆನ್ನೈ ಬೌಲರ್‌ಗಳ ವಿರುದ್ಧ ಮೊದಲ ವಿಕೆಟ್‌ಗೆ 67 ರನ್ ಸೇರಿಸಿದ ನಂತರ ಧೋನಿ ಸೂಪರ್ ಸ್ಟಂಪಿಂಗ್‌ಗಾಗಿ ಗಿಲ್ ಪೆವಿಲಿಯನ್ ತಲುಪಿದರು. ಬಳಿಕ ಸಹಾ ಸಾಯಿ ಸುದರ್ಶನ್ ಜೊತೆಗೂಡಿ ತಂಡವನ್ನು ಮುನ್ನಡೆಸಿದರು. ಆರಂಭದಲ್ಲಿ ನಿಧಾನವಾಗಿ ಆಡಿದ ಸುದರ್ಶನ್, ಸಾಹಾ ಔಟಾದ ಬಳಿಕ ವೇಗವಾಗಿ ಬ್ಯಾಟಿಂಗ್ ಆರಂಭಿಸಿದರು. ಇನ್ನು, ಇದು ಐಪಿಎಲ್ ಇತಿಹಾಸದಲ್ಲಿ ಫೈನಲ್‌ನಲ್ಲಿ ದಾಖಲಾದ ಗರಿಷ್ಠ ಸ್ಕೋರ್ ಆಗಿದೆ. 2016 ರಲ್ಲಿ ಸನ್‌ರೈಸರ್ಸ್ ಹೈದರಾಬಾದ್ 208 ರನ್ ಇದುವರೆಗಿನ ಫೈನಲ್‌ನಲ್ಲಿ ಗರಿಷ್ಠ ಸ್ಕೋರ್ ಆಗಿತ್ತು.

Leave a Reply

Your email address will not be published. Required fields are marked *

Back to top button
error: Content is protected !!