ತಾಲೂಕು ಸುದ್ದಿ

ಸಾಜ ಹಿರಿಯ ಪ್ರಾಥಮಿಕ ಶಾಲಾ ಮಂತ್ರಿಮಂಡಲ ರಚನೆ

ಸಾಜ : ಪುತ್ತೂರು ತಾಲೂಕು ಬಲ್ನಾಡು ಗ್ರಾಮದ ಸಾಜ ಹಿರಿಯ ಪ್ರಾಥಮಿಕ ಶಾಲಾ ಪ್ರಭಾರ ಮುಖ್ಯ ಶಿಕ್ಷಕರಾದ ಶಶಿಕಾಂತ್ ಇವರ ಮಾರ್ಗದರ್ಶನದಲ್ಲಿ ಜೂನ್ 10ರಂದು ಶಾಲಾ ಮಂತ್ರಿ ಮಂಡಲ ರಚನೆ ಮಾಡಲಾಯಿತು. ವಿದ್ಯಾರ್ಥಿಗಳು ಚುನಾವಣಾ ನಿಯಮದಂತೆ ಗುಪ್ತ ಮತದಾನದ ಮೂಲಕ ಶಾಲಾ ನಾಯಕಿ ಮತ್ತು ಉಪ ನಾಯಕಿಯನ್ನು ಆಯ್ಕೆ ಮಾಡಿದರು.

ಶಾಲಾ ನಾಯಕಿಯಾಗಿ ಮಾನ್ವಿತಾ ಎಮ್

ಉಪ ನಾಯಕಿಯಾಗಿ ಶ್ರೇಯಾ

ವಿರೋಧ ಪಕ್ಷದ ನಾಯಕಿಯಾಗಿ ಜೀವಿತಾ ಇವರನ್ನು ಆಯ್ಕೆ ಮಾಡಲಾಯಿತು. ಅನಂತರ ಶಾಲೆಯ ವಿವಿಧ ಜವಾಬ್ದಾರಿಯನ್ನು ನಿರ್ವಹಿಸಲು ವಿದ್ಯಾ ಮಂತ್ರಿ, ಶಿಸ್ತಿನ ಮಂತ್ರಿ, ಸ್ವಚ್ಚತಾ ಮಂತ್ರಿ, ಆರೊಗ್ಯ ಮಂತ್ರಿ, ಗೃಹ ಮಂತ್ರಿ, ಆಹಾರ ಮಂತ್ರಿ, ಕ್ರೀಡಾ ಮಂತ್ರಿ, ಕೃಷಿ ಮಂತ್ರಿ, ಗ್ರಂಥಾಲಯ ಮಂತ್ರಿ ಸ್ಥಾನಗಳಿಗೆ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಯಿತು. ಶಿಕ್ಷಕರಾದ ಶಶಿಕಾಂತ್ ಇವರು
ಮಂತ್ರಿ ಮಂಡಲದ ಕೆಲಸ ಕಾರ್ಯಗಳ ಬಗ್ಗೆ ಮಾಹಿತಿ ನೀಡಿದರು. ಸಹ ಶಿಕ್ಷಕರುಗಳಾದ ಶ್ರೀಮತಿ ಕವಿತಾ, ಅತಿಥಿ ಶಿಕ್ಷಕರುಗಳಾದ ಶ್ರೀಮತಿ ಗೌತಮೀ, ಶ್ರೀ ಕೃಷ್ಣ ಇವರು ಚುನಾವಣಾ ಪ್ರಕ್ರಿಯೆಗೆ ಸಹಕರಿಸಿದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!