ರಾಜ್ಯ

2023ನೇ ಸಾಲಿನ ಕೆಂಪೇಗೌಡ ಅಂತಾರಾಷ್ಟ್ರೀಯ ಪ್ರಶಸ್ತಿ ಘೋಷಣೆ

Click below to Share News

ಬೆಂಗಳೂರು : 2023ನೇ ಸಾಲಿನ ಕೆಂಪೇಗೌಡ ಅಂತಾರಾಷ್ಟ್ರೀಯ ಪ್ರಶಸ್ತಿ ಘೋಷಣೆಯಾಗಿದೆ. ಈ ಬಾರಿ ಇಬ್ಬರು ಸಾಧಕರು ಹಾಗೂ ಒಂದು ಸಂಸ್ಥೆಗೆ ಪ್ರತಿಷ್ಠಿತ ಪ್ರಶಸ್ತಿ ಒಲಿದು ಬಂದಿದೆ, ಕೆಂಪೇಗೌಡ ಜಯಂತಿ ಅಂಗವಾಗಿ ಪ್ರತಿ ವರ್ಷ ನೀಡುವ ಕೆಂಪೇಗೌಡ ಅಂತರಾಷ್ಟ್ರೀಯ ಪ್ರಶಸ್ತಿಗೆ ವಿಜೇತರ ಹೆಸರು ಘೋಷಣೆಯಾಗಿದೆ.

ಭಾರತದ ಅತಿ ದೊಡ್ಡ ಸ್ಟಾರ್ ಮಾರ್ಕೆಟ್ ಸಂಸ್ಥೆಯಾದ ಜಿರೋದದ ಸಂಸ್ಥಾಪಕ ನಿತಿನ್ ಕಾಮತ್, ಗಾಲ್ಫ್ ಆಟಗಾರ್ತಿ ಅದಿತಿ ಅಶೋಕ್ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಹಾಗೆಯೇ ಜಯದೇವ ಹೃದ್ರೋಗ ವಿಜ್ಞಾನ ಸಂಸ್ಥೆಯನ್ನು ಈ ಪ್ರತಿಷ್ಠಿತ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಇಂದು ಡಿಸಿಎಂ ಡಿಕೆ ಶಿವಕುಮಾರ್ ಪತ್ರಿಕಾಗೋಷ್ಠಿ ನಡೆಸಿ ಈ ವಿಚಾರ ತಿಳಿಸಿದ್ದಾರೆ.

ನಿತಿನ್ ಕಾಮತ್

ಯುವ ಉದ್ಯಮಿ ನಿತಿನ್ ಕಾಮತ್ ಬೆಂಗಳೂರಿನಲ್ಲೇ ಸಂಸ್ಥೆಯನ್ನು ಕಟ್ಟಿ ಬೆಳೆಸಿದ್ದಾರೆ. ಸ್ಟಾಕ್ ಬ್ರೋಕಿಂಗ್ ಉದ್ಯಮಕ್ಕೆ ಕಾಲಿಡುವ ಮೊದಲು ಕಾಮತ್ ಬೆಂಗಳೂರಿನ ಕಾಲ್ ಸೆಂಟರ್ ನಲ್ಲಿ ಕೆಲಸ ಮಾಡುತ್ತಿದ್ದರು.
ಅವರು 2010 ರಲ್ಲಿ ತಮ್ಮ ಸಹೋದರ ನಿಖಿಲ್ ಕಾಮತ್ ಅವರೊಂದಿಗೆ Zerodha ಸಂಸ್ಥೆ ಸ್ಥಾಪಿಸಿದರು. Zerodha ಷೇರುಗಳು, ಕರೆನ್ಸಿಗಳು ಮತ್ತು ಸರಕುಗಳಲ್ಲಿ ವ್ಯವಹರಿಸಲು ಬ್ರೋಕರೇಜ್ ಸೇವೆಗಳನ್ನು ಒದಗಿಸುತ್ತದೆ. 2019 ರಲ್ಲಿ, ಜಿರೋದದ ಭಾರತದ ಅತಿದೊಡ್ಡ ಸ್ಟಾಕ್ ಬ್ರೋಕರ್ ಆಯಿತು. ಇಂದು, ಜಿರೋದದ 10 ಮಿಲಿಯನ್ ಗ್ರಾಹಕರನ್ನು ಹೊಂದಿದೆ.

ಅದಿತಿ ಅಶೋಕ್

ಅದಿತಿ ಅಶೋಕ್ ಬೆಂಗಳೂರಿನ ಭಾರತೀಯ ವೃತ್ತಿಪರ ಗಾಲ್ಫ್ ಆಟಗಾರ್ತಿ . ಅವರು ಲೇಡೀಸ್ ಯುರೋಪಿಯನ್ ಟೂರ್ ಮತ್ತು LPGA ಟೂರ್ನಲ್ಲಿ ಆಡುತ್ತಾರೆ . ಅವರು 2016 ರ ಬೇಸಿಗೆ ಒಲಿಂಪಿಕ್ ನಲ್ಲಿ ತಮ್ಮ ಒಲಿಂಪಿಕ್ ಕ್ರೀಡಾಕೂಟಕ್ಕೆ ಪಾದಾರ್ಪಣೆ ಮಾಡಿದರು . ಅವರು ಟೋಕಿಯೊದಲ್ಲಿ 2020 ರ ಬೇಸಿಗೆ ಒಲಿಂಪಿಕ್ ಗೆ ಅರ್ಹತೆ ಪಡೆದರು , ಗಾಲ್ಫ್ನಲ್ಲಿ ಭಾರತವನ್ನು ಪ್ರತಿನಿಧಿಸಿದರು ಮತ್ತು 4 ನೇ ಸ್ಥಾನ ಪಡೆದರು.

ಪದ್ಮಶ್ರಿ ಡಾ. ಮಂಜುನಾಥ್

ಬೆಂಗಳೂರಿನಲ್ಲಿ ಪ್ರಧಾನ ಕಛೇರಿಯನ್ನು ಹೊಂದಿರುವ ಶ್ರೀ ಜಯದೇವ ಹೃದಯರಕ್ತನಾಳದ ವಿಜ್ಞಾನ ಮತ್ತು ಸಂಶೋಧನಾ ಆಸ್ಪತ್ರೆಯು ಹೃದಯ ಸಂಬಂಧಿ ಕಾಯಿಲೆಗಳ ಚಿಕಿತ್ಸೆ ಮತ್ತು ಸಂಶೋಧನೆಗೆ ಪ್ರಮುಖ ಸಂಸ್ಥೆಯಾಗಿದೆ. ಪದ್ಮಶ್ರಿ ಡಾ. ಮಂಜುನಾಥ್ ಇದರ ನಿರ್ದೇಶಕರು.

ಜೂನ್ 27 ರಂದು ನಡೆಯಲಿರುವ ಬೆಂಗಳೂರಿನ ನಿರ್ಮಾತೃ, ನಾಡಪ್ರಭು ಕೆಂಪೇಗೌಡರ 514ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ವಿಜೇತರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಎಂದು ಡಿಸಿಎಂ ಮಾಹಿತಿ ನೀಡಿದ್ದಾರೆ. ಪ್ರಶಸ್ತಿಯು 5 ಲಕ್ಷ ರೂಪಾಯಿ ನಗದು, ಕುದುರೆ ಮೇಲೆ ಕುಳಿತಿರುವ ಕೆಂಪೇಗೌಡರ ಪ್ರತಿಮೆಯನ್ನು ಒಳಗೊಂಡಿದೆ.


Click below to Share News

Related Articles

Leave a Reply

Your email address will not be published. Required fields are marked *

Back to top button
error: Content is protected !!