ರಾಜ್ಯ

ತಿರುವನಂತಪುರ-ಕಾಸರಗೋಡು ವಂದೇ ಭಾರತ್ ಎಕ್ಸ್‌ಪ್ರೆಸ್ ಸೇವೆ ಮಂಗಳೂರಿಗೆ ವಿಸ್ತರಣೆ.

Click below to Share News

ಮಂಗಳೂರು : ಕೇರಳದ ತಿರುವನಂತಪುರ- ಕಾಸರಗೋಡು ನಡುವೆ ಸಂಚರಿಸುತ್ತಿದ್ದ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲನ್ನು ದಕ್ಷಿಣ ಕನ್ನಡ ಜಿಲ್ಲೆಯ ಸಂಸದ ನಳಿನ್ ಕುಮಾರ್ ಕಟೀಲು ಅವರ ಮನವಿಯ ಮೇರೆಗೆ ಮಂಗಳೂರಿಗೆ ವಿಸ್ತರಿಸಲಾಗಿದೆ.‌

ಈ ಬಗ್ಗೆ ಬುಧವಾರ ರೈಲ್ವೇ ಸಚಿವಾಲಯ ಈ ಬಗ್ಗೆ ಆದೇಶ ಹೊರಡಿಸಿದೆ.ವಂದೇ ಭಾರತ್ ರೈಲು ನಂ.20632/20631 ಇನ್ನು ಮುಂದೆ ತಿರುವನಂತಪುರ- ಮಂಗಳೂರು ನಡುವೆ ಸಂಚಾರ ನಡೆಸಲಿದೆ. ನೂತನ ರೈಲ್ವೇ ವೇಳಾಪಟ್ಟಿಯಂತೆ ಈ ರೈಲು ಮಂಗಳೂರಿನಿಂದ ಬೆಳಗ್ಗೆ 06.15ಕ್ಕೆ ಹೊರಟು ಮಧ್ಯಾಹ್ನ 3.05 ಕ್ಕೆ ತಿರುವನಂತಪುರ ತಲುಪಲಿದೆ. ಹಾಗೆಯೇ ತಿರುವನಂತಪುರದಿಂದ ಸಂಜೆ 4.05ಕ್ಕೆ ಹೊರಟು ಹೊರಟು ರಾತ್ರಿ 12.40ಕ್ಕೆ ಮಂಗಳೂರು ತಲುಪಲಿದೆ. ಈ ವಂದೇ ಭಾರತ್ ರೈಲು ಬುಧವಾರ ಒಂದು ದಿನ ಹೊರತುಪಡಿಸಿ ವಾರದ ಆರು ದಿನಗಳಲ್ಲಿ ಸಂಚರಿಸಲಿದೆ. ಸಂಸದರ ಮನವಿ ಪುರಸ್ಕರಿಸಿ ವಂದೇ ಭಾರತ್ ರೈಲನ್ನು ಮಂಗಳೂರುವರೆಗೆ ವಿಸ್ತರಿಸಿದ ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಸಂಸದ ನಳಿನ್ ಕುಮಾರ್ ಕಟೀಲ್‌ ಕೃತಜ್ಞತೆ ಸಲ್ಲಿಸಿದ್ದಾರೆ.
Vande Bharat Express: 2024ರಲ್ಲಿ ಟ್ರ್ಯಾಕ್‌ಗಿಳಿದ ಹೊಸ ವಂದೇ ಭಾರತ್ ರೈಲುಗಳಿವು, ಮಾರ್ಗಗಳು, ವೇಳಾಪಟ್ಟಿ, ದರಗಳ ವಿವರ ಮಂಗಳೂರು ರೈಲು ನಿಲ್ದಾಣ ಪಾಲ್ಘಾಟ್ ರೈಲ್ವೇ ವಿಭಾಗಕ್ಕೆ ಸೇರಿದ್ದರೂ, ವಂದೇ ಭಾರತ್ ರೈಲನ್ನು ಕೇರಳದ ಕಾಸರಗೋಡಿನಿಂದ ತಿರುವನಂತಪುರಕ್ಕೆ ಆರಂಭಿಸಲಾಗಿತ್ತು. ಕೇರಳದ ಸಂಸದರುಗಳ ಲಾಬಿಯಿಂದ ಅಧಿಕಾರಿಗಳು ಮಂಗಳೂರನ್ನು ಗಣನೆಗೆ ತೆಗೆದುಕೊಳ್ಳದೆ ಕೇರಳಕ್ಕೆ ಆರು ತಿಂಗಳ ಮೊದಲೇ ವಂದೇ ಭಾರತ್ ರೈಲು ಓಡಾಟ ಆರಂಭಿಸಿದ್ದರು. ಇದರಿಂದ ರೈಲ್ವೇಗೆ ಲಾಭ ಇರಲಿಲ್ಲ. ಕೇರಳದ ಹೆಚ್ಚಿನ ಪ್ರಯಾಣಿಕರು ಮಂಗಳೂರಿಗೆ ಬರುತ್ತಿದ್ದರೇ ವಿನಾ ಕಾಸರಗೋಡುವರೆಗೆ ಬರುವುದು ಕಡಿಮೆಯಿತ್ತು. ಇದೀಗ ಅದೇ ರೈಲನ್ನು ಮಂಗಳೂರಿಗೆ ವಿಸ್ತರಣೆ ಮಾಡಿದ್ದು ಪ್ರಯಾಣಿಕರಿಗೆ ಅನುಕೂಲವಾಗಿದೆ.


Click below to Share News

Related Articles

Leave a Reply

Your email address will not be published. Required fields are marked *

Back to top button
error: Content is protected !!