ರಾಜ್ಯ

ಕರಾವಳಿ ಪ್ರದೇಶದಲ್ಲಿ ನಾಳೆ(ಏ.10)ರಂಜಾನ್ ಹಬ್ಬ ಆಚರಣೆ.

Click below to Share News

ಬೆಂಗಳೂರು, (ಏಪ್ರಿಲ್ 10): ಕೇರಳದಲ್ಲಿ ಚಂದ್ರ ದರ್ಶನವಾದ ಹಿನ್ನೆಲೆಯಲ್ಲಿ ಕರಾವಳಿ ಪ್ರದೇಶದಲ್ಲಿ ನಾಳೆಯೇ (ಏಪ್ರಿಲ್‌ 10) ರಂಜಾನ್ (ramadan Festival 2024) ಆಚರಿಸಲಾಗುತ್ತದೆ. ಈ ಬಗ್ಗೆ ದಕ್ಷಿಣ ಕನ್ನಡ ಖಾಝಿ ತ್ವಾಕಾ ಅಹ್ಮದ್ ಮುಸ್ಲಿಯಾರ್ ಘೋಷಿಸಿದ್ದಾರೆ.

ಇಂದು (ಏಪ್ರಿಲ್ 09) ಕೇರಳದಲ್ಲಿ ಚಂದ್ರ ದರ್ಶನವಾದ ಹಿನ್ನೆಲೆಯಲ್ಲಿ ಕರಾವಳಿ ಭಾಗದ ದಕ್ಷಿಣ ಕನ್ನಡ, ಕಾಸರಗೋಡು, ಉಡುಪಿಯಲ್ಲಿ ನಾಳೆ(ಏಪ್ರಿಲ್ 09) ರಂಜಾನ್ ಆಚರಿಸಲಾಗುತ್ತದೆ. ಇನ್ನು ಕರಾವಳಿ ಬಿಟ್ಟು ಕರ್ನಾಟಕದ ಎಲ್ಲೆಡೆ ನಾಡಿದ್ದು ಅಂದರೆ ಏಪ್ರಿಲ್ 11ರಂದು ರಂಜಾನ್ ಹಬ್ಬ ಆಚರಣೆ ಮಾಡಲಾಗುತ್ತದೆ.
ಕೇರಳದಲ್ಲಿ ಚಂದ್ರ ದರ್ಶನವಾದ ಹಿನ್ನೆಲೆಯಲ್ಲಿ ನಾಳೆಯೇ ರಂಜಾನ್ ಹಬ್ಬ ಎಂದು ದಕ್ಷಿಣ ಕನ್ನಡ ಖಾಝಿ ತ್ವಾಕಾ ಅಹ್ಮದ್ ಮುಸ್ಲಿಯಾರ್ ಘೋಷಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಇಪ್ಪತ್ತೊಂಬತ್ತು ದಿನಗಳ ಉಪವಾಸ ವೃತ ಆಚರಿಸಿದ್ದ ಮುಸ್ಲಿಮರು, ನಾಳೆ ಈದುಲ್ ಫಿತರ್ ಹಬ್ಬದೊಂದಿಗೆ ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆ ಮಾಡಿ ಉಪವಾಸ ಅಂತ್ಯಗೊಳಿಸಲಿದ್ದಾರೆ.

ಮುಸ್ಲಿಂ ಸಮುದಾಯದವರಿಗೆ ಇದು ಪವಿತ್ರ ಹಬ್ಬವಾಗಿದೆ. ಭಾರತ ಮಾತ್ರವಲ್ಲದೆ ವಿಶ್ವದೆಲ್ಲೆಡೆ ಈ ಹಬ್ಬವನ್ನು ಮುಸ್ಲಿಮರು ಸಡಗರ ಸಂಭ್ರಮದಿಂದ ಆಚರಿಸುತ್ತಾರೆ. ರಂಜಾನ್‌ ತಿಂಗಳ ಕೊನೆಯ ದಿನವನ್ನು ಈದ್-ಉಲ್-ಫಿತರ್ ಆಗಿ ಆಚರಿಸಲಾಗುತ್ತದೆ. ರಂಜಾನ್ ತಿಂಗಳ ಉದ್ದಕ್ಕೂ ಮುಸ್ಲಿಂ ಸಮುದಾಯದ ಜನರು ಬೆಳಗ್ಗೆ ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಉಪವಾಸವನ್ನು ಆಚರಿಸುತ್ತಾರೆ. ಈ ಅವಧಿಯಲ್ಲಿ ಆಹಾರ ಮಾತ್ರವಲ್ಲ ನೀರು ಸಹ ಕುಡಿಯುವುದಿಲ್ಲ. ಈದ್‌ ಚಂದ್ರ ಗೋಚರಿಸಿದ ಬಳಿಕ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಿ ರೋಜಾ ಆಚರಣೆಯನ್ನು ಮುಕ್ತಾಯಗೊಳಿಸುತ್ತಾರೆ.


Click below to Share News

Related Articles

Leave a Reply

Your email address will not be published. Required fields are marked *

Back to top button
error: Content is protected !!