ಸಮಗ್ರ ಸುದ್ದಿ

ಕಾಸರಗೋಡು : 70 ಲಕ್ಷ ರೂ ಬಂಪರ್ ಮೊತ್ತ ಒಲಿದು ಬಂದರೂ ಇನ್ನೂ ಪತ್ತೆಯಾಗಿಲ್ಲ ಅದೃಷ್ಟಶಾಲಿ

Click below to Share News

ಕಾಸರಗೋಡು : ಲಾಟರಿ ಖರೀದಿ ಗೀಳು ಅದೆಷ್ಟೋ ಮಂದಿಯ ಜೀವನವನ್ನೇ ಹಾಳು ಮಾಡಿದೆ . ಅದೇ ಲಾಟರಿ ಅದೃಷ್ಟ ತಂದು ಕೆಲವರ ಜೀವನವನ್ನೇ ಬದಲಾಯಿಸಿದೆ . ಆದರೆ ಇಲ್ಲೊಬ್ಬನಿಗೆ 70 ಲಕ್ಷ ರೂ . ಬಂಪರ್ ಲಾಟರಿ ಹೊಡೆದಿದೆ . ಆದರೆ ಇಷ್ಟೊಂದು ಮೊತ್ತದ ಬಹುಮಾನ ಒಲಿದು ಬಂದರೂ ಲಾಟರಿ ವಿಜೇತ ಅದೃಷ್ಟಶಾಲಿ ವ್ಯಕ್ತಿ ಯಾರು ಎಂದು ಇನ್ನೂ ತಿಳಿದುಬಂದಿಲ್ಲ.


ದಕ್ಷಿಣ ಕನ್ನಡ ಜಿಲ್ಲೆಯ ತಲಪಾಡಿಯಲ್ಲಿರುವ ಅಮಲ್ ಕನಕದಾಸರಿಗೆ ಸೇರಿದ ಜಯಮ್ಮ ಲಾಟರಿ ಏಜೆನ್ಸಿಯಲ್ಲಿ ಮೇ 7 ರಂದು ಈ ಲಾಟರಿ ಮಾರಾಟವಾಗಿತ್ತು . ಕೇರಳ ರಾಜ್ಯದ ಅಕ್ಷಯ ಲಾಟರಿ ಟಿಕೆಟ್ ( ನಂಬರ್ : ಎ.ಟಿ. 317545 ) ಇದಾಗಿದೆ . ಇದೀಗ ಲಾಟರಿಯ ಬಂಪರ್ ಮೊತ್ತವನ್ನು ಬಹುಮಾನವಾಗಿ ಗಳಿಸಿದ ವ್ಯಕ್ತಿ ಇನ್ನೂ ಪತಗತೆಯಾಗಿಲ್ಲ . ಈ ಟಿಕೆಟ್ ಖರೀದಿಸಿದ ವ್ಯಕ್ತಿ ಈವರೆಗೆ ಲಾಟರಿ ಏಜೆನ್ಸಿಯನ್ನೂ ಸಂಪರ್ಕಿಸಿಲ್ಲ . ಆದ್ದರಿಂದ ಏಜೆನ್ಸಿಯವರು ಬಂಪರ್ ಬಹುಮಾನ ವಿಜೇತನಿಗಾಗಿ ಕಾಯುತ್ತಿದ್ದಾರೆ.


Click below to Share News

Related Articles

Leave a Reply

Your email address will not be published. Required fields are marked *

Back to top button
error: Content is protected !!