ಸಮಗ್ರ ಸುದ್ದಿ

ಸಾಮಾಜಿಕ ಜಾಲತಾಣ ಒಬ್ಬ ವ್ಯಕ್ತಿಯನ್ನು ಅಟ್ಟಕ್ಕೇರಿಸಲೂಬಹುದು, ಪಾತಾಳಕ್ಕೂ ತಳ್ಳಬಹುದು.

ಸಾಮಾಜಿಕ ಜಾಲತಾಣದ ಇಂದು ಜನರ ಬದುಕಿನ ಒಂದು ಭಾಗವಾಗಿದೆ. ಸಾಮಾಜಿಕ ಜಾಲತಾಣದ ಹಲವಾರು ಕೆಡುಕು ಒಳತುಗಳನ್ನು ನಾವು ಕಾಣಬಹುದಾಗಿದೆ. ಈ ಜಾಲತಾಣ ಜಗತ್ತಿನ ಮೂಲೆ-ಮೂಲೆಗಳ ವಿಚಾರಗಳನ್ನು ಅಂಗೈಯಲ್ಲಿ ನೋಡಲು ಸಾಧ್ಯವಾಗುವ ಒಂದು ಜಾಲ ಬಂಧ.

ಎಲ್ಲ ಮಾಹಿತಿ ವಿಚಾರಗಳನ್ನು ಒಳಗೊಂಡ ಈ ಮಾಧ್ಯವಗಳು ಜನರಿಗೆ ಅತೀವ ಆಕರ್ಷಣೆ ಮತ್ತು ಆಸಕ್ತಿಯನ್ನು ಭರಿಸುತ್ತವೆ. ತಮ್ಮ ಪ್ರತಿನಿತ್ಯದ ಚಟುವಟಿಕೆಗಳನ್ನು ಇತರರೊಂದಿಗೆ ಹಂಚಿಕೊಳ್ಳುವ ಕಾತುರ, ಇದರ ಪರಿಣಾಮವಾಗಿ ತಮ್ಮ ನಿಯಂತ್ರಣವನ್ನು ತಾವೇ ಇವರ ಕೈಗೆ ಒಪ್ಪಿಸುತ್ತಾರೆ. ಸಾಮಾಜಿಕ ಜಾಲತಾಣವು ಯಾವುದೇ ಒಬ್ಬ ವ್ಯಕ್ತಿಯನ್ನು ಅಟ್ಟಕ್ಕೇರಿಸಲೂಬಹುದು, ಪಾತಾಳಕ್ಕೂ ತಳ್ಳಬಹುದು.
ಇನ್ನೂ ಈಗಿನ ವಿಡಿಯೋ, ರೀಲ್ಸ್ ಗಳಿಗೂ ಜನರು ಬೇಗ ಆಕರ್ಷಿತರಾಗುತ್ತಿದ್ದಾರೆ. ದುರಂತವೇನೆಂದರೆ, ಈಗಿನ ಜನರಿಗೆ ಗಂಟೆಗಟ್ಟಲೆಯ ವಿಡಿಯೋಗಳನ್ನು ನೋಡುವಷ್ಟು ತಾಳೆ, ಸಹನೆ ಇರದ ಕಾರಣ ಒಂದೆರಡು ನಿಮಿಷಗಳ ವಿಡಿಯೋ ಗಳನ್ನು ನಿಜವೆಂದು ಅಂದುಕೊಳ್ಳುತ್ತಾರೆ. ಇಂತಹ ಸೂಕ್ತ ವಿಚಾರಗಳು ಜನರ ಮನಸ್ಸಿನ ಮೇಲೆ ಅಗಾಧ ಪರಿಣಾಮವನ್ನು ಬೀರುತ್ತದೆ ಸಾಮಾಜಿಕ ಜಾಲತಾಣ ಹೇಗೆಂದರೆ ಜನರು ತಮ್ಮನ್ನು ತಾವ ಅರ್ಥಮಾಡಿಕೊಳ್ಳುವ ಮೊದಲು ಮಾಧ್ಯಮಗಳು ಅರ್ಥ ಮಾಡಿಕೊಳ್ಳುತ್ತವೆ. ಉದಾಹರಣೆಗೆ : ಇಸ್ಟಾಗ್ರಾಮ್, ಫೇಸ್ಬುಕ್ ನಲ್ಲಿ ನಮಗೆ ಆಸಕ್ತಿಯಿರುವ ವಿಚಾರಗಳು ಯಾವುದೆಂದು ಅದೇ ತಿಳಿಸುತ್ತವೆ. ಇದು ಸಾಮಾಜಿಕ ಜಾಲತಾಣ ಜನರ ಮನಸ್ಸನ್ನು ಅರ್ಥಮಾಡಿಕೊಂಡ ರೀತಿ.
ಇಷ್ಟಲ್ಲದೇ ರಾಜಕೀಯವಾಗಿ, ಸಾಮಾಜಿಕವಾಗಿ ನೋಡುವುದಾದರೆ, ತಮ್ಮ ಸ್ವಾರ್ಥ ಉದ್ದೇಶಕ್ಕೆ ಇದನ್ನು ಅಸ್ತವಾಗಿ ಬಳಸುವವರೇ ಹೆಚ್ಚು ಎಂಬುದೇ ಒಂದು ದುರಂತ ಸಾಮಾಜಿಕ ಜಾಲತಾಣದಿಂದ ಉಂಟಾದ ಪ್ರೇಮ – ಪ್ರಣಯಗಳ ಅಂತದಲ್ಲಾದ ಮೋಸ, ಅನ್ಯಾಯಗಳಂತಹ ಅನಾಹುತಗಳು ಕಣ್ಣೆದುರಿಗೆ ಬರುತ್ತವೆ. ಟೆಲಿಕಾಂ ಕಂಪೆನಿಗಳ ಲಾಭವನ್ನು ತಪ್ಪಿಸುವ ಒಳನೋಟದ ಉದ್ದೇಶದಿಂದ ದಿನದ ಡೇಟಾ ಖಾಲಿಯಾಗುವರೆಗೂ ಮಲಗದ ವ್ಯಕ್ತಿಗಳೇ ಹೆಚ್ಚು.

ಆದರೆ – ಅವೆಲ್ಲದರ ಮಧ್ಯೆ ಅವುಗಳ ಒಳಿತುಗಳನ್ನು ನಾವು ಹುಡುಕುವುದಾದರೆ, ಪ್ರಾರಂಭದಲ್ಲಿ ಹೇಳುವಂತೆ ಸಾಮಾಜಿಕ ಜಾಲತಾಣ ಜಗತ್ತನ್ನೇ ಅಂಗೈಯಲ್ಲಿ ಇಟ್ಟುಕೊಂಡಂತೆ, ಇವರಿಂದ ಅಪಾರವಾದ ಜ್ಞಾನವನ್ನು ಪಡೆದುಕೊಳ್ಳಬಹುದು ಆದರೆ, ಮಾಹಿತಿ ಕಲಿಸುವ ರೀತಿ ಸುಯಾಗಿದ್ದರೆ ಮಾತ್ರ ಜಗತ್ತಿನ ಯಾವುದೇ ಮೂಲೆಯಲ್ಲಿರುವ ವ್ಯಕ್ತಿಯನ್ನು ಕೂಡ ಒಂದು ನಿಮಿಷದಲ್ಲಿ ನಮ್ಮ ಗೆಳೆಯರನ್ನಾಗಿಸುವ ಶಕ್ತಿ ಸಾಮಾಜಿಕ ಜಾಲತಾಣಕ್ಕೆ ಇವೆಯಾದರೂ ನಮ್ಮ ವಿವೇಚನೆ ಕಾರ್ಯಗತವಾಗಿದ್ದರೆ ಮಾತ್ರ ನಮ್ಮ ಆಯ್ಕೆ ಉತ್ತಮವಾಗಿಡಲು ಸಾಧ್ಯ.

ಯಾವುದೇ ಒಂದು ವಿಚಾರವನ್ನಾದರೂ ನಾವು ಕಣ್ಣಾರೆ ಕಂಡರೂ, ಯಾರೇ ಕೇಳಿದರು ಸಹ ಅವುಗಳನ್ನು ನಂಬುವ ಮೊದಲು ನಮ್ಮ ವಿವೇಚನೆಯ ತರ್ಕಕ್ಕೆ ಒಪ್ಪಿಸಬೇಕು.
ಈ ಆದುನಿಕ ಜಗತ್ತಿನಲ್ಲಿ ನಾವು ಹೊಂದಿಕೊಳ್ಳಬೇಕಾದರೆ ಸಾಮಾಜಿಕ ಜಾಲತಾಣದೊಂದಿಗೆ ನಾವು ಹೊಂದಿಕೊಳ್ಳಲೇಬೇಕು ಅದು, ಅವುಗಳನ್ನು ಸಮತೋಲನದಲ್ಲಿ ವಿಭಾಯಿಸಬೇಕು. ಆಧುನಿಕತೆ ನಮ್ಮ ಬದುಕಿನ ಭಾಗವಾಗಬೇಕೇ ಹೊರತು, ಆಧುನಿಕತೆಯೇ ಬದುಕಾಗಬಾರದು. ನಮ್ಮ ವಿವೇಚನೆ ನಮ್ಮ ಜತೆಗಿದ್ದರೆ ನಮ್ಮ ನಿಯಂತ್ರಣ ನಮ್ಮಲ್ಲಿಯೇ ಇರುತ್ತದೆ. ಹೀಗೆ, ಸಾಮಾಜಿಕ ಜಾಲತಾಣ ಜನರ ಮೇಲೆ ಪ್ರಭಾವ ಬೀರುತ್ತದೆ.
✍️ ನಿಕ್ಷಿತಾ, ಮರಿಕೆ
ಸ.ಪ.ದ ಮಹಿಳಾ ಕಾಲೇಜು ಪುತ್ತೂರು.

Related Articles

Leave a Reply

Your email address will not be published. Required fields are marked *

Back to top button
error: Content is protected !!