ಸಮಗ್ರ ಸುದ್ದಿ

4 ಲಕ್ಷ ಸಂಬಳ ಪಡೆಯುವ 37ರ ಮಹಿಳೆಗೆ ವರ ಬೇಕಾಗಿದ್ದಾರೆ.

Click below to Share News

ಮುಂಬೈ : 4 ಲಕ್ಷ ಸಂಬಳ ಪಡೆಯುವ 37ರ ಮಹಿಳೆಗೆ ವರ ಬೇಕಾಗಿದ್ದಾರೆ, ತನ್ನ ಷರತ್ತುಗಳಿಗೆ ಒಪ್ಪಿಗೆಯಾಗುವಂತಹ ಹುಡುಗನನ್ನು ವರ್ಷಗಳಿಂದ ಹುಡುಕುತ್ತಿದ್ದಾಳೆ. ತನಗೆ ಯಾವ ರೀತಿಯ ವರ ಬೇಕು ಎಂದು ಮಹಿಳೆ ವಿವರಿಸಿರುವ ಪೋಸ್ಟ್ ಒಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.

ಹತ್ತು ವರ್ಷಗಳಿಂದ ಮುಂಬೈನಲ್ಲಿ ಕೆಲಸ ಮಾಡುತ್ತಿರುವ ಮರಾಠಿ ಮಹಿಳೆಯೊಬ್ಬರು ತನಗಾಗಿ ವರನನ್ನು ಹುಡುಕುತ್ತಿದ್ದಾರೆ.
ಮಹಿಳೆಯ ವಯಸ್ಸು 37 ವರ್ಷ. ಆದರೆ ಆಕೆ ತನ್ನ ಮದುವೆಗೆ ಸಂಬಂಧಿಸಿದಂತೆ ಕೆಲವು ಷರತ್ತುಗಳನ್ನು ಹೊಂದಿದ್ದು, ತನ್ನ ಷರತ್ತುಗಳಿಗೆ ಒಪ್ಪಿಗೆಯಾಗುವಂತಹ ಹುಡುಗನನ್ನು ವರ್ಷಗಳಿಂದ ಹುಡುಕುತ್ತಿದ್ದಾಳೆ. ತನಗೆ ಯಾವ ರೀತಿಯ ವರ ಬೇಕು ಎಂದು ಮಹಿಳೆ ವಿವರಿಸಿರುವ ಪೋಸ್ಟ್ ಒಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.

@Ambar_SIFF_MRA ಎಂಬ ಟ್ವಿಟರ್ ಖಾತೆಯಲ್ಲಿ ಏಪ್ರಿಲ್ 02ರಂದು ಹಂಚಿಕೊಡಿರುವ ಈ ಪೋಸ್ಟ್ ಒಂದೇ ದಿನದಲ್ಲಿ 5ಲಕ್ಷಕ್ಕೂ ಹೆಚ್ಚಿನ ವೀಕ್ಷಣೆಯನ್ನು ಪಡೆದುಕೊಂಡಿದೆ. ಪೋಸ್ಟರ್ ಮರಾಠಿಯಲ್ಲಿ ಬರೆದಿರುವುದನ್ನು ಇಂಗ್ಲೀಷ್ಗೆ ಅನುವಾದ ಮಾಡಲಾಗಿದೆ.
ಮಹಿಳೆ ಕಳೆದ 10 ವರ್ಷಗಳಿಂದ ಮುಂಬೈನಲ್ಲಿ ಕೆಲಸ ಮಾಡುತ್ತಿದ್ದು ವರ್ಷಕ್ಕೆ 4 ಲಕ್ಷ ರೂ. ದುಡಿಯುತ್ತಿದ್ದಾರೆ. ಈಕೆಯ ಪ್ರಕಾರ ಈಕೆಯನ್ನು ಮದುವೆಯಾಗುವ ವರ ಡಾಕ್ಟರ್, ಸಿಎ, ಅಥವಾ ಯಾವುದೇ ಉನ್ನತ ಹುದ್ದೆಯಲ್ಲಿದ್ದು, ವರ್ಷಕ್ಕೆ ಕನಿಷ್ಠ 1 ಕೋಟಿ ಸಂಬಳ ಗಳಿಸುವವನಾಗಿರಬೇಕು. ಇದಲ್ಲದೇ ಮುಂಬೈನಲ್ಲಿ ಸ್ವಂತ ಮನೆಯನ್ನು ಹೊಂದಿರಬೇಕು ಎಂದು ಬರೆಯಲಾಗಿದೆ.
ಈಕೆಯ ಇಷ್ಟೆಲ್ಲಾ ಶರತ್ತುಗಳನ್ನು ಹೊಂದಿರುವ ಪೋಸ್ಟ್ ಎಲ್ಲೆಡೆ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಬಗೆಬಗೆಯಾಗಿ ಕಾಮೆಂಟ್ ಮಾಡಿದ್ದಾರೆ. ‘ಒಂದು ಮಾಹಿತಿಯ ಪ್ರಕಾರ, ಭಾರತದಲ್ಲಿ 1 ಕೋಟಿ ರೂ.ಗಿಂತ ಹೆಚ್ಚು ಗಳಿಸುವವರ ಸಂಖ್ಯೆ ಕೇವಲ 1.7 ಲಕ್ಷ. ಅಂತಹ ಪರಿಸ್ಥಿತಿಯಲ್ಲಿ, ಈ ಮಹಿಳೆ ತನ್ನ 37 ನೇ ವಯಸ್ಸಿನಲ್ಲಿ ತನ್ನ ‘ಕನಸಿನ ರಾಜಕುಮಾರ’ ಸಿಗುವುದು ಕಷ್ಟ’ ಎಂದು ನೆಟ್ಟಿಗರೊಬ್ಬರು ಕಾಮೆಂಟ್ನಲ್ಲಿ ಬರೆದುಕೊಂಡಿದ್ದಾರೆ.


Click below to Share News

Related Articles

Leave a Reply

Your email address will not be published. Required fields are marked *

Back to top button
error: Content is protected !!