ಸಮಗ್ರ ಸುದ್ದಿ

ಭಾರತೀಯ ರೀಸರ್ವ್ ಬ್ಯಾಂಕ್ : 2000 ರೂಪಾಯಿ ಮುಖಬೆಲೆಯ ನೋಟುಗಳನ್ನು ‘ರಿಕ್ವೆಸ್ಟ್‌ ಫಾರ್ಮ್’ ಮೂಲಕ ಸೋಮವಾರದಿಂದ ನೋಟು ವಿನಿಮಯ ಮಾಡಿಕೊಳ್ಳಬಹುದು

Click below to Share News

ಬೆಂಗಳೂರು: ಭಾರತೀಯ ರೀಸರ್ವ್ ಬ್ಯಾಂಕ್ (RBI) ಸದ್ಯ ಚಾಲ್ತಿಯಲ್ಲಿರುವ 2000ರೂಪಾಯಿ ಮುಖಬೆಲೆಯ ನೋಟುಗಳನ್ನು ಹಿಂಡೆಯುವುದಾಗಿ ಘೋಷಿಸಿದೆ. ಮೇ 22ರಿಂದ ನೋಟು ಬದಲಾವಣೆಗೆ ಅವಕಾಶ ನೀಡಲಾಗಿದೆ. ನೋಟು ವಿನಿಮಯಕ್ಕಾಗಿ ಕೇಂದ್ರ ಸರ್ಕಾರ ‘ರಿಕ್ವೆಸ್ಟ್ ಫಾರ್ಮ್‌’ ಒಂದನ್ನು ಬಿಡುಗಡೆ ಮಾಡಿದೆ.
ಭಾರತೀಯ ರೀಸರ್ವ್ ಬ್ಯಾಂಕ್ (RBI) ಪ್ರಕಾರ ಸೋಮವಾರದಿಂದ ಸಾರ್ವಜನಿಕರು ಎಂದಿನಂತೆ 2000 ರೂ.ಮುಖಬೆಲೆ ನೋಟನ್ನು ತಮ್ಮ ಖಾತೆಗಳಿಗೆ ಜಮೆ ಮಾಡಬಹುದು. ಇಲ್ಲವೇ ನೋಟುಗಳನ್ನು ಸಿಮಿತ ಸಂಖ್ಯೆಗಳಲ್ಲಿ ಬದಲಾವಣೆಗೆ ಅವಕಾಶ ಇದೆ.

ಹೀಗೆ ದೊಡ್ಡ ನೋಟುಗಳನ್ನು ವಿನಿಮಯ ಮಾಡಿಕೊಳ್ಳುವವರಿಗೆ ಮಾತ್ರ ಈ ‘ರಿಕ್ವೆಸ್ಟ್ ಫಾರ್ಮ್‌’ ಸಂಬಂಧಿಸಿದೆ.
ಈ ರಿಕ್ವೆಸ್ಟ್ ಫಾರ್ಮ್‌ ಭರ್ತಿ ಪ್ರಕ್ರಿಯೆ, ಯಾವೆಲ್ಲ ಅಂಶಗಳನ್ನು ಭರ್ತಿ ಮಾಡಬೇಕು. ಅಲ್ಲದೇ ಯಾವ ಗುರುತಿನ ಚೀಟಿಯನ್ನು ಹಣ ಬದಲಾವಣೆಗೆ ವೇಳೆ ನೀಡಬೇಕು ಎಂಬುದನ್ನು ಇಲ್ಲಿ ತಿಳಿಯಿರಿ.
ಶುಕ್ರವಾರ ಮೇ 19ರಂದು ಚಾಲ್ತಿಯಲ್ಲಿರುವ 2000 ರೂ.ಮುಖಬೆಲೆ ನೋಟನ್ನು ಹಿಂಪಡೆಯುವುದಾಗಿ ಆರ್‌ಬಿಐ ಘೋಷಿಸಿತು. ಅಲ್ಲದೇ ಈ ನೋಟು ಇದೇ ವರ್ಷ ಸೆಪ್ಟಂಬರ್ 30ರವರೆಗೆ ಮಾತ್ರ ವಿನಿಮಯ, ಜಮೆಗೆ ಅವಕಾಶ ಇದ್ದು, ನಂತರ ಅದರ ಚಲಾವಣೆ ಸ್ಥಗಿತಗೊಳ್ಳಲಿದೆ. ನಾವು ಈ ನೋಟನ್ನು ಹಿಂಪಡೆಯುತ್ತಿದ್ದೇವೆ ಎಂದು ಆರ್‌ಬಿಐ ನಿರ್ಧಾರ ಪ್ರಕಟಿಸಿತು.


ಸೋಮವಾರದಿಂದ ನೋಟು ಬದಲಿಸಿಕೊಳ್ಳಿ
ಸೋಮವಾರದಿಂದ ನೋಟು ಬದಲಾವಣೆಗೆ ಹಾಗೂ ಜಮೆಗೆ ಪ್ರಕ್ರಿಯೆ ಆರಂಭವಾಗಲಿದೆ. ಆರ್‌ಬಿಐನ ನಿರ್ಧಾರದ ಅನ್ವಯ ಸಾರ್ವಜನಿಕರು ಒ೦ದು ದಿನಕ್ಕೆ ಗರಿಷ್ಠ 20 ಸಾವಿರ ರೂಪಾಯಿ ಅಂದರೆ 2000ರೂ. ಮುಖಬೆಲೆಯ 10 ನೋಟುಗಳನ್ನು ಅಷ್ಟೇ ಮೌಲ್ಯದ ಇತರ ನೋಟುಗಳಿಗೆ ಬದಲಾವಣೆ ಮಾಡಿಕೊಳ್ಳಬಹುದು. ಹೀಗೆ ಷರತ್ತು ವಿಧಿಸಿರುವ ಆರ್‌ಬಿಐ ನೋಟು ವಿನಿಯಮಕ್ಕೆ ಈ ರಿಕ್ವೆಸ್ಟ್ ಫಾರ್ಮ್‌ ಬಳಕೆಗೆ ತಂದಿದೆ. ಇನ್ನೂ ಸೋಮವಾರದಿಂದ ಹಣ ಜಮೆ ಮಾಡುವವರು ಸಹ 2000 ರೂ. ಮುಖಬೆಲೆಯ ಹಣದ ವಿವರ ಬರೆದು ಜಮೆ ಮಾಡಲು ಸಹ ಅವಕಾಶ ನೀಡಿದೆ.


ನೋಟು ಬದಲಾವಣೆ, ಫಾರ್ಮ್‌ ಭರ್ತಿ ಪ್ರಕ್ರಿಯೆ ಹೀಗಿರಲಿದೆ

* ನೋಟು ವಿನಿಮಯ ಮಾಡಿಕೊಳ್ಳುವ ಖಾತೆದಾರರು ಫಾರ್ಮ್‌ನಲ್ಲಿ ತಮ್ಮ ಸಂಪೂರ್ಣ ಹೆಸರನ್ನು ಇಂಗ್ಲಿಷ್ ಕ್ಯಾಪಿಟಲ್ ಅಕ್ಷರಗಳಲ್ಲಿ ಬರೆಯಬೇಕು.
* 2000ರೂಪಾಯಿ ನೋಟು ಬದಲಾವಣೆ ವೇಳೆ ಜಮೆ ಮಾಡುವ ಬ್ಯಾಂಕ್‌ ಹಾಗೂ ಶಾಖೆ ಹೆಸರನ್ನು ನಮೂದಿಸಬೇಕು. ಹತ್ತಿರ ಯಾವುದೇ ಬ್ಯಾಂಕ್‌ನಲ್ಲಿಯೂ ಹಣ ಬದಲಾವಣೆ ಮಾಡಿಕೊಳ್ಳಬಹುದು.
* ಫಾರ್ಮ್‌ ನಲ್ಲಿ ಒಟ್ಟು ಆರು ವಿಧದ ಗುರುತಿನ ಚೀಟಿಯ ಆಯ್ಕೆ ನೀಡಲಾಗಿದೆ. ಅದರಲ್ಲಿ ಹಣ ವಿನಿಮಯ ವೇಳೆ ಯಾವ ಒಂದು ಐಡಿ ಪ್ರೊಫ್ ನೀಡುತ್ತಿದ್ದೇವೆ ಎಂದು ಟಿಕ್ ಮಾರ್ಕ್ ಮಾಡುವುದು ಕಡ್ಡಾಯ. (ವೋಟರ್ ಐಡಿ, ನರೇಕಾರ್ಡ್, ಡಿಎಲ್, ಆಧಾರ್ ಕಾರ್ಡ್, ಪಾಸ್ಪೋರ್ಟ್ ಮತ್ತಿತರೆ).
* ಹಣ ವಿನಿಮಯಕ್ಕೆ ನೀವು ನೀಡುವ ಐಡಿ ಪ್ರೊಫ್‌ನ ನಂಬರ್ ಫಾಮ್‌ನಲ್ಲಿ ದಾಖಲಿಸಬೇಕು. ಟಿಕ್ ಮಾಡಿದ ಐಡಿ ಪ್ರೂಫ್ ಅನ್ನು ನಿಗದಿತ ಬ್ಯಾಂಕ್ ಅಧಿಕಾರಿಗಳಿಗೆ (ಕೌಂಟರ್) ತೋರಿಸಬೇಕು.
* ಎಷ್ಟು ನೋಟುಗಳನ್ನು ಬದಲಾವಣೆ ಮಾಡಿಕೊಳ್ಳುತ್ತಿದ್ದೇವೆ, ಅದರ ಮೌಲ್ಯದ ವಿವರಗಳನ್ನು ಭರ್ತಿ ಮಾಡಬೇಕು.
* ಕೊನೆಗೆ ಫಾರ್ಮ್‌ನಲ್ಲಿ ಸ್ಥಳ, ದಿನಾಂಕ ಸೇರಿದಂತೆ ಅಗತ್ಯ ಮಾಹಿತಿ ನಮೂದಿಸಿ ಐಡಿ ಪ್ರೂಫ್ ಸಮೇತ ಬ್ಯಾಂಕ್ ಸಿಬ್ಬಂದಿಗೆ ನೀಡಿ 2000 ರೂ. ನೋಟಿಗೆ ಬದಲಾಗಿ ಅಷ್ಟೇ ಮೌಲ್ಯದ ಬದಲಿ ನೋಟುಗಳನ್ನು ಪಡೆಯಬಹುದು ಎಂದು ಆರ್‌ಬಿಐ ತಿಳಿಸಿದೆ.


Click below to Share News

Related Articles

Leave a Reply

Your email address will not be published. Required fields are marked *

Back to top button
error: Content is protected !!