ಸಮಗ್ರ ಸುದ್ದಿ

“ಎವರೆಸ್ಟ್ ಚಿಕನ್ ಮಸಾಲಾ”(Everest chicken masala) ಬಳಸದಂತೆ ಆಹಾರ ಸುರಕ್ಷತಾ ಅಧಿಕಾರಿ ಸೂಚನೆ..!

Click below to Share News

ಕಾರವಾರ: ಎವರೆಸ್ಟ್ ಚಿಕನ್ ಮಸಾಲಾ (Everest chicken masala)  ಬಳಸದಂತೆ ಆಹಾರ ಸುರಕ್ಷತಾ ಅಧಿಕಾರಿ ಸೂಚನೆ ನೀಡಿದ್ದಾರೆ. ಮೆಣಸಿನಪುಡಿಗೆ ಬಳಸುವ ಕೀಟನಾಶಕ ಎಥಿಲಿನ್ ಆಕ್ಸೈಡ್ ಪ್ರಮಾಣ ಎವರೆಸ್ಟ್ ಚಿಕನ್ ಮಸಾಲಾದಲ್ಲಿ ಕಂಡು ಬಂದಿದೆ. ಮಸಲಾ ಪದಾರ್ಥದಲ್ಲಿ ಎಥಿಲಿನ್ ಆಕ್ಸೈಡ್ ಪ್ರಮಾಣ ಕೇವಲ ಶೇ.0.01ರಷ್ಟು ಇರಬೇಕು.

ಆದರೆ ಎವರೆಸ್ಟ್ ಚಿಕನ್ ಮಸಾಲಾದಲ್ಲಿ ಶೇ.3.93ರಷ್ಟು ಪ್ರಮಾಣದಲ್ಲಿದ್ದು ಇದು ಆರೋಗ್ಯದ ಮೇಲೆ ಪರಿಣಾಮ ಬೀರಲಿರುವ ಹಿನ್ನಲೆಯಲ್ಲಿ ಇದರ ಬಳಕೆಯನ್ನು ಕೂಡಲೇ ನಿಲ್ಲಿಸುವಂತೆ ಉತ್ತರ ಕನ್ನಡ ಜಿಲ್ಲೆ ಆಹಾರ ಸುರಕ್ಷತಾ ಅಧಿಕಾರಿ ರಾಜಶೇಖರ್ ಮನವಿ ಮಾಡಿದ್ದಾರೆ.
ಆಹಾರ ಇಲಾಖೆ ಆಯುಕ್ತರ ಸೂಚನೆ ಮೇರೆಗೆ ಪರೀಕ್ಷೆ ನಡೆಸಿದ ವೇಳೆಯಲ್ಲಿ ಶೇ.3.92ರಷ್ಟು ಕೀಟನಾಶಕ ಎಥಿಲಿನ್ ಆಕ್ಸೈಡ್ ಪ್ರಮಾಣ ಇರುವುದನ್ನು ಕಂಡುಕೊಳ್ಳಲಾಗಿದೆ ಈ ಹಿನ್ನಲೆಯಲ್ಲಿ ಜನತೆ ಇದನ್ನು ಬಳಕೆ ಮಾಡಬಾರದು ಅಂತ ಅವರು ಹೇಳಿದ್ದಾರೆ.
ಇನ್ನೂ ಇದಲ್ಲದೇ ಎವರೆಸ್ಟ್ ಮಸಾಲಾ ಕಂಪನಿಗೆ ಈಗಾಗಲೇ ನೋಟಿಸ್ ಕಳುಹಿಸಿದ್ದು, ಅವರ ವಿರುದ್ದ ಕಾನೂನು ಕ್ರಮವನ್ನು ಕೈಗೊಳ್ಳಲಾಗುವುದು ಅಂಥ ತಿಳಿಸಿದ್ದಾರೆ. ಇದಲ್ಲದೇ ಎವರೆಸ್ಟ್ ಚಿಕನ್ ಮಸಾಲಾ ಪಾಕೆಟ್‌ ಸರಬರಾಜು ಮಾಡುವುದನ್ನು ಕೂಡಲೇ ನಿಲ್ಲಿಸಬೇಕು, ಇದಲ್ಲದೇ ಅಂಗಡಿಗಳಿಗೆ ನೀಡಿರುವ ಅದನ್ನು ಹಿಂಪಡೆಯಲು ಸೂಚನೆ ನೀಡಲಾಗಿದೆ ಅಂಥ ಹೇಳಿದರು. ಎವರೆಸ್ಟ್ ಚಿಕನ್ ಮಸಾಲಾ ಸೇರಿದಂಥೆ ಇತರೆ 15 ತರಹದ ಮಸಾಲಾ ಪೌಡರ್ಗಳನ್ನು ತಪಾಸಣೆಗೆ ಕಳುಹಿಸಿಸಲಾಗಿದ್ದು, ಅವುಗಳ ವರದಿಗಾಗಿ ಕಾಯಲಾಗುತ್ತಿದೆ ಅಂತ ತಿಳಿಸಿದರು.


Click below to Share News

Related Articles

Leave a Reply

Your email address will not be published. Required fields are marked *

Back to top button
error: Content is protected !!